ಮೊಹಮ್ಮದ್‌ ಶಮಿಗೆ ಅಮೆರಿಕಾ ವೀಸಾ ನೀಡಲು ನಕಾರ, ರಕ್ಷಣೆಗೆ ನಿಂತ ಬಿಸಿಸಿಐ

ಮುಂಬರುವ ವೆಸ್ಟ್‌ ಇಂಡೀಸ್ ಪ್ರವಾಸದ ಭಾರತ ತಂಡದಲ್ಲಿರುವ ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರಿಗೆ ಅಮೆರಿಕಾ ವೀಸಾ ಕೊಡಿಸುವಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಯಶಸ್ವಿಯಾಗಿದೆ.
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ
ನವದೆಹಲಿ: ಮುಂಬರುವ ವೆಸ್ಟ್‌ ಇಂಡೀಸ್ ಪ್ರವಾಸದ ಭಾರತ ತಂಡದಲ್ಲಿರುವ ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರಿಗೆ ಅಮೆರಿಕಾ ವೀಸಾ ಕೊಡಿಸುವಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಯಶಸ್ವಿಯಾಗಿದೆ. 
ಕೌಟುಂಬಿಕ ಹಿಂಸಾಚಾರ ಮತ್ತು ಪೊಲೀಸ್‌ ದಾಖಲೆಗಳಿರುವ ಹಿನ್ನೆಲೆಯಲ್ಲಿ ಮೊಹಮ್ಮದ್‌ ಶಮಿ ಅವರಿಗೆ ವೀಸಾ ನೀಡಲು ಯುಎಸ್‌ ನಿರಾಕರಿಸಿತ್ತು. ಆದ್ದರಿಂದ ಬಿಸಿಸಿಐ ಅಲ್ಲಿನ ರಾಯಭಾರಿ ಕಚೇರಿಗೆ ಪತ್ರ ಬರೆಯುವ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ ಎಂದು ಬಿಸಿಸಿಐ ಕಾರ್ಯಕಾರಿ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಮೊಹಮ್ಮದ್‌ ಶಮಿ ಅನೈತಿಕ ಸಂಬಂಧ ಮತ್ತು ಕೌಟುಂಬಿಕ ಹಿಂಸಾಚಾರ ಬಗ್ಗೆ ಮೊಹಮ್ಮದ್‌ ಶಮಿ ವಿರುದ್ಧ ಪತ್ನಿ ಜಹಾನ್‌ ಆರೋಪ ಮಾಡಿದ್ದರು. ಇದಾದ ಬಳಿಕ ಶಮಿ ಮತ್ತು ಅವರ ಪತ್ನಿ ಹಸೀನ್ ಜಹಾನ್ ಬೇರ್ಪಟ್ಟಿದ್ದರು. ಕೋಲ್ಕತ್ತಾದಲ್ಲಿ ಶಮಿ ವಿರುದ್ಧ ಜಹಾನ್ ಎಫ್ಐಆರ್ ಕೂಡ ದಾಖಲಿಸಿದ್ದಾರೆ. ಇವರಿಬ್ಬರ ವಿಚ್ಛೇದನ ಪ್ರಕರಣವು ಪ್ರಸ್ತುತ ನ್ಯಾಯಾಲಯದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com