ಐಸಿಸಿ ಟೆಸ್ಟ್ ಶ್ರೇಯಾಂಕ: ವಿರಾಟ್, ಟೀಂ ಇಂಡಿಯಾದ ಅಗ್ರ ಸ್ಥಾನ ಭದ್ರ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಶನಿವಾರ ಬಿಡುಗಡೆ ಮಾಡಿರುವ ತಾಜಾ ಶ್ರೇಯಾಂಕ ಪಟ್ಟಿಯಲ್ಲಿ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ....
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಶನಿವಾರ ಬಿಡುಗಡೆ ಮಾಡಿರುವ ತಾಜಾ ಶ್ರೇಯಾಂಕ ಪಟ್ಟಿಯಲ್ಲಿ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾದ ಮೊದಲ ಸ್ಥಾನ ಭಧ್ರವಾಗಿದೆ.
ವಿರಾಟ್ ಕೊಹ್ಲಿ 922 ಅಂಕಗಳೊಂದಿಗೆ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಟೀಂ ಇಂಡಿಯಾ 113 ಅಂಕ ಕಲೆ ಹಾಕಿದ್ದು, ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ವಿರಾಟ್ ಪಡೆ ಆಗಸ್ಟ್ ಮೂರರಂದು ವಿಂಡೀಸ್ ಪ್ರವಾಸದಲ್ಲಿ ಟಿ-20, ಏಕದಿನ ಹಾಗೂ ಟೆಸ್ಟ್ ಸರಣಿ ಆಡಲಿದೆ.
ಎರಡನೇ ಶ್ರೇಯಾಂಕದಲ್ಲಿ ಕೆನ್ ವಿಲಿಯಮ್ಸನ್ (913) ಭಾರತದ ಚೆತೇಶ್ವರ ಪೂಜಾರ (881) ಮೂರು, ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ (857) ನಾಲ್ಕು ಮತ್ತು ಹೆನ್ರಿ ನಿಕೋಲ್ಸ್ (778) ಐದನೇ ಸ್ಥಾನದಲ್ಲಿದ್ದಾರೆ.
ತಂಡಗಳ ಶ್ರೇಯಾಂಕದಲ್ಲಿ ನ್ಯೂಜಿಲೆಂಡ್ (111) ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮೊದಲ ಐದು ಸ್ಥಾನಗಳಲ್ಲಿವೆ.
ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಿನ ಏಕೈಕ ಟೆಸ್ಟ್ ಮುಗಿದ ಬಳಿಕ, ಐಸಿಸಿ ಟೆಸ್ಟ್ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಐರ್ಲೆಂಡ್ ವಿರುದ್ಧ 143 ರನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಂಗ್ಲೆಂಡ್ ಆಟಗಾರ ಸ್ಯಾಮ್ ಕರನ್ ಮತ್ತು ಜ್ಯಾಕ್ ಲೀಚ್ ಶ್ರೇಯಾಂಕದಲ್ಲಿ ಏರಿಕೆ ಆಗಿದೆ. ಇಂಗ್ಲೆಂಡ್ ಗುರುವಾರದಿಂದ ಆಸ್ಟ್ರೇಲಿಯಾ ವಿರುದ್ಧ ಬಹುನಿರೀಕ್ಷಿತ ಟೆಸ್ಟ್‌ ಆಡಲಿದೆ.
ಲೀಚ್ ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ನಲ್ಲಿ ತಂಡಕ್ಕೆ ನೆರವಾಗಿದ್ದರು. ಅಲ್ಲದೆ 92 ರನ್ ಬಾರಿಸಿ ಮಿಂಚಿದ್ದರು. ಇವರು ಬ್ಯಾಟಿಂಗ್ ಶ್ರೇಯಾಂಕದಲ್ಲಿ 57 ಸ್ಥಾನ ಏರಿಕೆ ಕಂಡಿದ್ದು, 117ನೇ ಸ್ಥಾನದಲ್ಲಿದ್ದಾರೆ.
ಸ್ಯಾಮ್ ಕರನ್ ಅವರು ಮೂರು ವಿಭಾಗಗಳ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದಾರೆ. ಬ್ಯಾಟಿಂಗ್ ನಲ್ಲಿ ಮೂರು ಸ್ಥಾನ ಜಿಗಿದು 52, ಬೌಲಿಂಗ್ ನಲ್ಲಿ 67 ಹಾಗೂ ಆಲ್ ರೌಂಡರ್ ಶ್ರೇಯಾಂಕದಲ್ಲಿ 23 ಸ್ಥಾನ ಸುಧಾರಣೆ ಕಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com