ವಿಶ್ವಕಪ್‌ ಫೈನಲ್‌ ವಿವಾದಾತ್ಮಕ 'ಬೌಂಡರಿ ನಿಯಮ' ಬಗ್ಗೆ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಸಭೆ!

ಐಸಿಸಿ ವಿಶ್ವಕಪ್‌ 2019ರ ಫೈನಲ್‌ನಲ್ಲಿ ವಿವಾದಾತ್ಮಕ 'ಬೌಂಡರಿ ನಿಯಮ'ದ ಕುರಿತು ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ ಮುಂದಿನ ಸಭೆಯಲ್ಲಿ ಚರ್ಚಿಸಲಿದೆ.

Published: 29th July 2019 12:00 PM  |   Last Updated: 29th July 2019 02:56 AM   |  A+A-


Anil Kumble

ಅನಿಲ್ ಕುಂಬ್ಳೆ

Posted By : VS
Source : UNI
ನವದೆಹಲಿ: ಐಸಿಸಿ ವಿಶ್ವಕಪ್‌ 2019ರ ಫೈನಲ್‌ನಲ್ಲಿ ವಿವಾದಾತ್ಮಕ  'ಬೌಂಡರಿ ನಿಯಮ'ದ ಕುರಿತು ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ  ಮುಂದಿನ ಸಭೆಯಲ್ಲಿ ಚರ್ಚಿಸಲಿದೆ. 

ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ)ಪ್ರಧಾನ ವ್ಯವಸ್ಥಾಪಕ ಗಿಯಾಫ್‌ ಅಲ್ಲಾರ್ಡೈಸ್ ತಿಳಿಸಿದ್ದಾರೆ. ಮುಂದಿನ ಸಭೆಯಲ್ಲಿ ಕ್ರಿಕೆಟ್ ಸಮಿತಿಯು ವಿಶ್ವಕಪ್ ವೇಳೆ ಹುಟ್ಟಿಕೊಂಡ ವಿವಾದಗಳನ್ನು ಪರಿಗಣಿಸಲಿದೆ ಎಂದು ಅಲ್ಲಾರ್ಡೈಸ್ ಕ್ರಿಕ್‌ ಇನ್ಫೋ ಜೊತೆ  ಹೇಳಿದ್ದಾರೆ. 

ಐಸಿಸಿ ಕ್ರಿಕೆಟ್ ಮುಂದಿನ ಸಭೆಯು 2020ರ ಮೊದಲ ತ್ರೈಮಾಸಿಕದಲ್ಲಿ  ನಡೆಯಲಿದೆ. 'ಪಂದ್ಯ ಟೈ ಆದಾಗ 2009ರಿಂದಲೂ ವಿಜೇತ ತಂಡವನ್ನು ನಿರ್ಧರಿಸಲು ಐಸಿಸಿ  ಪಂದ್ಯಗಳಲ್ಲಿ ಬೌಲ್‌ ಔಟ್‌ಗೆ ಬದಲಾಗಿ ಸೂಪರ್ ಓವರ್ ನಿಯಮವನ್ನು ಅನುಸರಿಸಲಾಗುತ್ತಿದೆ.  ಸೂಪರ್ ಓವರ್‌ನಲ್ಲೂ ಪಂದ್ಯ ಸಮಬಲ ಎನಿಸಿದರೆ ಟೈ ಬ್ರೇಕರ್ ಅಗತ್ಯ ಬರುತ್ತದೆ. ಆದ್ದರಿಂದ  ಸಭೆಯ ಚರ್ಚೆ ಪಂದ್ಯದಲ್ಲಿ ಗಳಿಸಿದ ಬೌಂಡರಿಗಳ ಸಂಖ್ಯೆಗೆ ಸಂಬಂಧಿಸಿದೆ ಎಂದು ಗಿಯಾಫ್‌ ಅಲ್ಲಾರ್ಡೈಸ್ ವಿವರಿಸಿದ್ದಾರೆ.
Stay up to date on all the latest ಕ್ರಿಕೆಟ್ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp