ವಿಶ್ವಕಪ್ ಸೋಲಿನ ನಂತರವೂ ನಾಯಕಾಗಿ ಕೊಹ್ಲಿ ಮುಂದುವರಿಕೆಗೆ ಗವಾಸ್ಕರ್ ಆಕ್ಷೇಪ!

ವಿಶ್ವಕಪ್ ನ ಸೆಮಿಫೈನಲ್ಸ್ ನಲ್ಲಿ ಭಾರತ ಸೋತ ನಂತರವೂ ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಲ್ಲಿ ಮುಂದುವರೆಸಿರುವುದನ್ನು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.

Published: 29th July 2019 12:00 PM  |   Last Updated: 29th July 2019 07:32 AM   |  A+A-


Gavaskar questions Kohli's position as skipper post WC debacle

ವಿಶ್ವಕಪ್ ಸೋಲಿನ ನಂತರವೂ ನಾಯಕಾಗಿ ಕೊಹ್ಲಿ ಮುಂದುವರಿಕೆಗೆ ಗವಾಸ್ಕರ್ ಆಕ್ಷೇಪ!

Posted By : SBV SBV
Source : IANS
ನವದೆಹಲಿ: ವಿಶ್ವಕಪ್ ನ ಸೆಮಿಫೈನಲ್ಸ್ ನಲ್ಲಿ ಭಾರತ ಸೋತ ನಂತರವೂ ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಲ್ಲಿ ಮುಂದುವರೆಸಿರುವುದನ್ನು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ. 

ಮಿಡ್-ಡೇ ಗೆ ಬರೆದಿರುವ ಅಂಕಣದಲ್ಲಿ ಸುನಿಲ್ ಗವಾಸ್ಕರ್ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ನೇಮಕಗೊಂಡಿದ್ದು ವಿಶ್ವಕಪ್ ವರೆಗೆ ಮಾತ್ರ. ಆ ನಂತರ ಅವರನ್ನು ಮುಂದುವರೆಸುವುದರ ಬಗ್ಗೆ ಸಣ್ಣ ಸಭೆ ನಡೆಯಬೇಕಿತ್ತು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. 

ಸಭೆಯೇ ನಡೆಯದೇ ವಿರಾಟ್ ಕೊಹ್ಲಿಯನ್ನು ನಾಯಕನ ಸ್ಥಾನಕ್ಕೆ ಮರು ನೇಮಕ ಮಾಡಿರುವುದು, ವಿರಾಟ್ ಕೊಹ್ಲಿ ಅಥವಾ ಆಯ್ಕೆ ಸಮಿತಿಯ ಸಂತೋಷಕ್ಕಾಗಿ ತಂಡದ ನಾಯಕನನ್ನು ಆಯ್ಕೆ ಮಾಡಿದಂತಿದೆ ಎಂದು ಗವಾಸ್ಕರ್ ತೀಕ್ಷ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ವಿರಾಟ್ ಕೊಹ್ಲಿಯನ್ನು ವೆಸ್ಟ್ ಇಂಡೀಸ್ ವಿರುದ್ಧದ ಎಲ್ಲಾ 3 ಫಾರ್ಮೆಟ್ ಗಳ ಟೂರ್ನಿಗಳಿಗೂ ನಾಯಕನನ್ನಾಗಿ ನೇಮಕ ಮಾಡಿದೆ. 

ಗವಾಸ್ಕರ್ ಕೊಹ್ಲಿ ನಾಯಕತ್ವವನ್ನು ಮಾತ್ರ ಪ್ರಶ್ನಿಸದೇ ಕೊಹ್ಲಿಯ ತಂಡದ ಆಯ್ಕೆ ಮಾಡುವ ವಿಧಾನವನ್ನೂ ಪ್ರಶ್ನಿಸಿದ್ದಾರೆ. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp