ಭಾರತೀಯ ಯುವತಿಯನ್ನು ವಿವಾಹವಾಗಲಿರುವ ಮತ್ತೋರ್ವ ಪಾಕ್ ಕ್ರಿಕೆಟಿಗ!

ಪಾಕ್ ಕ್ರಿಕೆಟಿಗ ಶೋಯೆಬ್​ ಮಲಿಕ್ ಸಾನಿಯಾ ಮಿರ್ಜಾ ವಿವಾಹದ ನಂತರ ಇದೇ ಮಾದರಿಯಲ್ಲಿ ಮತ್ತೋರ್ವ ಪಾಕಿಸ್ತಾನದ ಕ್ರಿಕೆಟಿಗ ಭಾರತೀಯ ಯುವತಿಯನ್ನು ವಿವಾಹವಾಗಲಿದ್ದಾರೆ.
ಭಾರತೀಯ ಯುವತಿಯನ್ನು ವಿವಾಹವಾಗಲಿರುವ ಮತ್ತೋರ್ವ ಪಾಕ್ ಕ್ರಿಕೆಟಿಗ!
ಭಾರತೀಯ ಯುವತಿಯನ್ನು ವಿವಾಹವಾಗಲಿರುವ ಮತ್ತೋರ್ವ ಪಾಕ್ ಕ್ರಿಕೆಟಿಗ!
ಗುಜ್ರಾನ್ವಾಲಾ: ಪಾಕ್ ಕ್ರಿಕೆಟಿಗ ಶೋಯೆಬ್​ ಮಲಿಕ್ ಸಾನಿಯಾ ಮಿರ್ಜಾ ವಿವಾಹದ ನಂತರ ಇದೇ ಮಾದರಿಯಲ್ಲಿ ಮತ್ತೋರ್ವ ಪಾಕಿಸ್ತಾನದ ಕ್ರಿಕೆಟಿಗ ಭಾರತೀಯ ಯುವತಿಯನ್ನು ವಿವಾಹವಾಗಲಿದ್ದಾರೆ. 
ಪಾಕಿಸ್ತಾನದ ಬಲಗೈ ವೇಗಿ ಹಸನ್ ಅಲಿ ಭಾರತೀಯ ಯುವತಿಯಾದ ಶಾಮಿಯಾ ಅರ್ಜೂಅವರನ್ನು ಆಗಸ್ಟ್ 20 ರಂದು ವಿವಾಹವಾಗಲಿದ್ದಾರೆ. 
ದುಬೈ ನಲ್ಲಿ ಇಬ್ಬರ ವಿವಾಹ ನಡೆಯಲಿದೆ. 25 ವರ್ಷಗಳ ಹಸನ್ ಅರ್ಜೂ ನಡುವೆ ವಿಶ್ವಕಪ್ ಟೂರ್ನಿ ವೇಳೆ ಪ್ರೇಮಾಂಕುರವಾಗಿತ್ತು. ಅರ್ಜೂ ಇಂಜಿನಿಯರ್ ಆಗಿದ್ದು ದುಬೈ ನಲ್ಲಿ ಕೆಲಸ ಮಾಡುತ್ತಿದ್ದಾರೆ. 
ಶೋಯೆಬ್ ಮಲೀಕ್, ಜಹೀರ್ ಅಬ್ಬಾಸ್, ಮೊಹ್ಸಿನ್ ಖಾನ್ ಬಳಿಕ ಭಾರತೀಯ ಯುವತಿಯನ್ನು ವಿವಾಹವಾಗುತ್ತಿರುವ 4 ನೇ ಪಾಕ್ ಕ್ರಿಕೆಟಿಗ ಹಸನ್ ಅರ್ಜೂ ಆಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com