ಕೋಚ್ ಆಯ್ಕೆ ಬಗ್ಗೆ ಅಭಿಪ್ರಾಯ ಹೇಳಲು ಕೊಹ್ಲಿಗೆ ಎಲ್ಲಾ ಹಕ್ಕಿದೆ- ಸೌರವ್ ಗಂಗೂಲಿ

ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ತನ್ನ ಅಭಿಪ್ರಾಯ ಹೇಳಿಕೊಳ್ಳಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಎಲ್ಲಾ ಹಕ್ಕಿದೆ ಎಂದು ಟೀಂ ಇಂಡಿಯಾ ಮಾಜಿ ಕ್ಟಾಪ್ಟನ್ ಸೌರವ್ ಗಂಗೂಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ಕೊಲ್ಕತ್ತಾ: ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ತನ್ನ ಅಭಿಪ್ರಾಯ ಹೇಳಿಕೊಳ್ಳಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಎಲ್ಲಾ ಹಕ್ಕಿದೆ ಎಂದು ಟೀಂ ಇಂಡಿಯಾ ಮಾಜಿ ಕ್ಟಾಪ್ಟನ್ ಸೌರವ್ ಗಂಗೂಲಿ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಗುತ್ತಿಗೆ ಅವಧಿ ಮುಗಿಯಲಿರುವ ಮುಖ್ಯ ಕೋಚ್ ರವಿಶಾಸ್ತ್ರೀ ಮುಂದುವರೆಯಬೇಕೆಂದು ಕೊಹ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹೇಳಿಕೊಂಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ,  ವಿರಾಟ್ ಕೊಹ್ಲಿ ನಾಯಕರಾಗಿದ್ದು, ತನ್ನ ಅಭಿಪ್ರಾಯ ಹೇಳಿಕೊಳ್ಳಲು ಮುಕ್ತ ಸ್ವಾತಂತ್ರ್ಯವಿದೆ ಎಂದಿದ್ದಾರೆ.
2017ರಲ್ಲಿ ಶಾಸ್ತ್ರೀ ಅವರನ್ನು ಮುಖ್ಯ ಕೋಚ್ ಆಗಿ  ಆಯ್ಕೆ ಮಾಡಿದ ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಸೌರವ್ ಗಂಗೂಲಿ  ಕೂಡಾ ಇದ್ದರು. ಸಚಿನ್ ತೆಂಡೊಲ್ಕರ್ , ವಿವಿಎಸ್ ಲಕ್ಷ್ಮಣ್  ಸಮಿತಿಯಲ್ಲಿದ್ದ ಇತರ ಸದಸ್ಯರಾಗಿದ್ದಾರೆ.
ಈ ಬಾರಿಯ  ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಕಪಿಲ್ ದೇವ್, ಅನುಶುಮಾನ್ ಗಾಯಕ್ ವಾಡ್ ಮತ್ತು ರಂಗಸ್ವಾಮಿ ಇದ್ದು, ನೂತನ ಕೋಚ್ ನ್ನು  ಆಯ್ಕೆ ಮಾಡಲಿದ್ದಾರೆ. 
ಟೀಂ ಇಂಡಿಯಾದ ಪ್ರಮುಖ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ನೀಡಲಾಗಿದ್ದ ಗುಡುವು ಮುಗಿದಿದ್ದು, ಇದೀಗ ರವಿಶಾಸ್ತ್ರೀ ಆಯ್ಕೆ ಪ್ರಕ್ರಿಯೆಯಲ್ಲಿ ಇದ್ದಕ್ಕಿದ್ದಂತೆ ಪ್ರವೇಶ ಪಡೆದುಕೊಂಡಿದ್ದಾರೆ.  ಕಪಿಲ್ ದೇವ್ ನೇತೃತ್ವದ ಸಮಿತಿ ಡಿಸೆಂಬರ್ ತಿಂಗಳಲ್ಲಿ ಟೀಂ ಇಂಡಿಯಾ ಮಹಿಳಾ ಕೋಚ್ ಆಗಿ ಡಬ್ಯ್ಲೂ ವಿ ರಾಮನ್ ಅವರನ್ನು ಆಯ್ಕೆ ಮಾಡಿತ್ತು.
ಉದ್ದೀಪನಾ ಮದ್ದು ಸೇವನೆ ಆರೋಪದಲ್ಲಿ 8 ತಿಂಗಳು ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿರುವ ಪೃಥ್ವಿ ಶಾ ಬಗ್ಗೆ ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ, ಪೃಥ್ವಿ ಶಾ ವಿಚಾರದಲ್ಲಿ ಏನಾಗಿದೆ ಎಂಬುದು ನನ್ನಗೆ ಗೊತ್ತಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com