ದಕ್ಷಿಣ ಆಫ್ರಿಕಾವನ್ನು ಕಡೆಗಣಿಸಿಲ್ಲ, ಅದು ಅಪಾಯಕಾರಿ ತಂಡ..: ವಿರಾಟ್ ಕೊಹ್ಲಿ

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಕೂಡ ಪ್ರಬಲ ತಂಡವಾಗಿದ್ದು, ಅದನ್ನು ಕಡೆಗಣಿಸಿಲ್ಲ. ನಮ್ಮ ಗುರಿ ಗೆಲುವು ಮಾತ್ರ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕೊಹ್ಲಿ ಸುದ್ದಿಗೋಷ್ಠಿ
ಕೊಹ್ಲಿ ಸುದ್ದಿಗೋಷ್ಠಿ
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಕೂಡ ಪ್ರಬಲ ತಂಡವಾಗಿದ್ದು, ಅದನ್ನು ಕಡೆಗಣಿಸಿಲ್ಲ. ನಮ್ಮ ಗುರಿ ಗೆಲುವು ಮಾತ್ರ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇಂದು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ತನ್ನ ಅಭಿಯಾನ ಆರಂಭಿಸುತ್ತಿದ್ದು, ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಣಸುತ್ತಿದೆ. ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗೆಲುವು ಮಾತ್ರ ನಮ್ಮ ಗುರಿ. ಟೂರ್ನಿಯ ಯಾವುದೇ ತಂಡವನ್ನೂ ತಾವು ಕಡೆಗಣಿಸುವುದಿಲ್ಲ ಎಂದು ಹೇಳಿದ್ದಾರೆ.
'ಈ  ಬಾರಿಯ ವಿಶ್ವಕಪ್ ನಮಗೆ ಸವಾಲಾಗಿದೆ. ವಿಶ್ವಕಪ್​ ಅನ್ನು ನಾವು ಹಗುರವಾಗಿ ಪರಿಗಣಿಸಿಲ್ಲ. ಎಲ್ಲಾ ತಂಡಗಳು ಬಲಿಷ್ಠವಾಗಿದೆ. 2017ರ ಚಾಂಪಿಯನ್ ಟ್ರೋಫಿಯಲ್ಲಿ ಮಾಡಿದ ತಪ್ಪುಗಳನ್ನು ನಾವು ತಿದ್ದಿಕೊಂಡಿದ್ದೇವೆ. ದ. ಆಫ್ರಿಕಾ ಅತ್ಯಂತ ಅಪಾಯಕಾರಿ ತಂಡ. ಕೆಲ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿರುಬಹುದು, ಆದರೆ ತಂಡದ ಯುವ ಆಟಗಾರರನ್ನು ಕಡೆಗಣಿಸುವಂತಿಲ್ಲ. ಪಂದ್ಯವನ್ನು ನಾವು ನಿರ್ಲಕ್ಷಿಸುವುದಿಲ್ಲ' ಎಂದು ಹೇಳಿದ್ದಾರೆ.
ಅಂತೆಯೇ ತಮ್ಮ ಪ್ರದರ್ಶನದ ಕುರಿತು ಮಾತನಾಡಿದ ಕೊಹ್ಲಿ, 'ನಾನು ಬ್ಯಾಟ್ ಮಾಡಲು ಕ್ರಿಸ್ ಗೆ ಇಳಿದಾಗ ಅಭಿಮಾನಿಗಳು ನನ್ನಿಂದ ಶತಕವನ್ನು ನಿರೀಕ್ಷೆ ಮಾಡುತ್ತಾರೆ. ಆದರೆ, ನನ್ನ ಗುರಿ ಭಾರತದ ಗೆಲುವಿನ ಕಡೆ ಮಾತ್ರ. ಅದು 100, 60, 40 ರನ್​ ಗಳಿಂದ ಆಗಿರಬಹುದು ಎಂದು ಹೇಳಿದ್ದಾರೆ.
ರಬಾಡಾ ಹೇಳಿಕೆಗೆ ನೋ ಕಮೆಂಟ್ಸ್
ಇದೇ ವೇಳೆ ದಕ್ಷಿಣ ಆಫ್ರಿಕಾ ವೇಗಿ ರಬಾಡ ಹೇಳಿರುವ ಮಾತಿಗೆ ಉತ್ತರಿಸಿದ ಕೊಹ್ಲಿ, ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಏನನ್ನು ಮಾತನಾಡಲು ನಾನು ಇಚ್ಚಿಸುವುದಿಲ್ಲ. ಈ ಬಗ್ಗೆ ಮಾತನಾಡಬೇಕು ಎಂದಿದ್ದರೆ, ಇಬ್ಬರು ಜೊತೆಯಾಗಿ ಎದುರು ಕೂತು ಮಾತನಾಡುತ್ತೇವೆ ಎಂದು ಹೇಳಿದರು. ಇನ್ನು ಇತ್ತೀಚೆಗಷ್ಟೆ ದ. ಆಫ್ರಿಕಾ ತಂಡದ ಬೌಲರ್ ಕಗಿಸೊ ರಬಾಡ, ‘ಕೊಹ್ಲಿ ನಿಂದನೆಯನ್ನು ಸ್ವೀಕರಿಸಲು ತಯಾರಿಲ್ಲ. ಅವರೊಬ್ಬ ಪರಿಪಕ್ವವಲ್ಲದ ಆಟಗಾರ’ ಎಂಬ ಹೇಳಿಕೆ ನೀಡಿದ್ದರು. ಇದು ವ್ಯಾಪಕ ವೈರಲ್ ಆಗಿತ್ತು.
ಸ್ಟೇಯ್ನ್ ಅನುಪಸ್ಥಿತಿ ನೋವು ತಂದಿದೆ
ಇದೇ ವೇಳೆ ಆಫ್ರಿಕಾದ ಪ್ರಮುಖ ವೇಗಿ ಡೇಲ್ ಸ್ಟೇಯ್ನ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರಗುಳಿದಿದ್ದು, ಈ ಕುರಿತು ಮಾತನಾಡಿದ ಕೊಹ್ಲಿ, ಸ್ಟೇಯ್ನ್ ಅನುಪಸ್ಥಿತಿ ದಕ್ಷಿಣ ಆಫ್ರಿಕಾ ತಂಡವನ್ನು ಖಂಡಿತವಾಗಿಯೂ ಕಾಡಲಿದೆ. ವೈಯುಕ್ತಿಕವಾಗಿ ನನಗೂ ಕೂಡ ಅವರು ಟೂರ್ನಿಯಿಂದ ಹೊರುಗುಳಿದಿದ್ದು ನೋವು ತಂದಿದೆ. ಅವರು ನಿಜಕ್ಕೂ ಉತ್ತಮ ವೇಗಿ ಎಂದು ಶ್ಲಾಘಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com