ಪಾಕ್ ಮಾತಿಗೆ ಐಸಿಸಿ ಮಣೆ: ಬಲಿದಾನ ಬ್ಯಾಡ್ಜ್ ಹಾಕದಂತೆ ಧೋನಿ, ಬಿಸಿಸಿಐಗೆ ಐಸಿಸಿ ಖಡಕ್ ಸೂಚನೆ!

ಭಾರತೀಯ ಯೋಧರ ಬಲಿದಾನಕ್ಕೆ ಪ್ರತೀಕವಾಗಿ ಟೀಂ ಇಂಡಿಯಾದ ಹಿರಿಯ ಆಟಗಾರ ಎಂಎಸ್ ಧೋನಿ ಕೀಪಿಂಗ್ ಗ್ಲೌಸ್ ಮೇಲೆ ಭಾರತೀಯ ಸೇನೆಯ ಚಿಹ್ನೆ ಬಳಿಸಿ ವಿಶೇಷ ಗೌರವ ಸಲ್ಲಿಕೆ ಮಾಡಿದ್ದು...

Published: 07th June 2019 12:00 PM  |   Last Updated: 08th June 2019 04:55 AM   |  A+A-


MS Dhoni

ಎಂಎಸ್ ಧೋನಿ

Posted By : VS VS
Source : Online Desk
ದುಬೈ: ಭಾರತೀಯ ಯೋಧರ ಬಲಿದಾನಕ್ಕೆ ಪ್ರತೀಕವಾಗಿ ಟೀಂ ಇಂಡಿಯಾದ ಹಿರಿಯ ಆಟಗಾರ ಎಂಎಸ್ ಧೋನಿ ಕೀಪಿಂಗ್ ಗ್ಲೌಸ್ ಮೇಲೆ ಭಾರತೀಯ ಸೇನೆಯ ಚಿಹ್ನೆ ಬಳಿಸಿ ವಿಶೇಷ ಗೌರವ ಸಲ್ಲಿಕೆ ಮಾಡಿದ್ದು ಇದಕ್ಕೆ ತೀವ್ರ ಮಚ್ಚುಗೆ ವ್ಯಕ್ತವಾಗಿತ್ತು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇದೀಗ ಐಸಿಸಿ ಬ್ಯಾಡ್ಜ್ ತೆಗೆಯುವಂತೆ ಧೋನಿಗೆ ಹಾಗೂ ಬಿಸಿಸಿಐಗೆ ಸೂಚಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಧೋನಿಯ ಕೀಪಿಂಗ್ ಗ್ಲೌಸ್ ಮೇಲಿನ ಚಿಹ್ನೆಯನ್ನು ತೆಗೆಯುಂತೆ ನಿನ್ನೆ ಮನವಿ ಮಾಡಿತ್ತು. ಆದರೆ ಭಾರತೀಯರು ಧೋನಿ ಕೆಲಸಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಇದರಿಂದ ಬಿಸಿಸಿಐ ಸಹ ಧೋನಿ ಬೆನ್ನಿಗೆ ನಿಂತಿತ್ತು. 

ಇಂದು ಬಿಸಿಸಿಐ ಮತ್ತೊಮ್ಮೆ ಐಸಿಸಿಗೆ ಧೋನಿ ಅವರು ಬಲಿದಾನ ಬ್ಯಾಡ್ಜ್ ಬಳಸಲು ಅವಕಾಶವನ್ನು ನೀಡುವಂತೆ ಮನವಿ ಮಾಡಿತ್ತು. ಆದರೆ ಐಸಿಸಿ ಮಾತ್ರ ಇದು ನಿಯಮಗಳಿಗೆ ವಿರುದ್ಧವಾಗಿದ್ದು ಇನ್ನು ಬ್ಯಾಡ್ಜ್ ಧರಿಸದಂತೆ ಆದೇಶಿಸಿದೆ. 

ಹೌದು.. ಕಳೆದ ಬುಧವಾರ ಸೌಥ್ಯಾಂಪ್ಟನ್ ನ ರೋಸ್ ಬಾಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಎಂಎಸ್ ಧೋನಿ ವಿಶೇಷ ಗ್ಲೌಸ್ ಧರಿಸಿದ್ದರು. ಈ ಗ್ಲೌಸ್ ಮೇಲೆ ಭಾರತೀಯ ಸೇನೆಯ ಬಲಿದಾನದ ಲೋಗೋ ಅಚ್ಚು ಹಾಕಲಾಗಿತ್ತು. ಪಂದ್ಯದ ಆರಂಭದಿಂದಲೂ ಇದು ಯಾರ ಕಣ್ಣಿಗೂ ಬಿದ್ದಿರಲಿಲ್ಲ.

ಆದರೆ ಧೋನಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಪೆಹ್ಲುಕ್ವಾಯೋ ಅವರನ್ನು ಸ್ಟಂಪೌಟ್ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಟಿವಿ ರೀಪ್ಲೆ ವೇಳೆ ಧೋನಿ ಸ್ಟಂಪೌಂಟ್ ಅನ್ನು ಜೂಮ್ ಮಾಡಿ ತೋರಿಸುವಾಗ ಧೋನಿ ಗ್ಲೌಸ್ ಮೇಲಿದ್ದ ಸೈನಿಕರ ಬಲಿದಾನದ ಲೋಗೋ ಕೂಡ ಕಂಡಿದೆ. ಕೂಡಲೇ ಧೋನಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ಕೂಡ ವ್ಯಕ್ತವಾಗಿದೆ.

ಇನ್ನು ತಮ್ಮ ಅದ್ಬುತ ಕ್ರಿಕೆಟ್ ಪ್ರದರ್ಶನದಿಂದಲೇ ಧೋನಿ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಿದ್ದರು. ಅಲ್ಲದೆ ಧೋನಿ ಅಗ್ರಾದಲ್ಲಿ ಕೆಲ ದಿನಗಳ ಕಾಲ ಸೇನಾ ತರಬೇತಿಯಲ್ಲಿ ಕೂಡ ಪಾಲ್ಗೊಂಡಿದ್ದರು. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp