ಎಂಎಸ್ ಧೋನಿ ಇಂಗ್ಲೆಂಡ್‌ ಗೆ ತೆರಳಿರುವುದು ಕ್ರಿಕೆಟ್‌ ಆಡಲು ಯುದ್ಧ ಮಾಡಲಿಕ್ಕಲ್ಲ: ಪಾಕ್ ಸಚಿವ

ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಎಂಎಸ್ ಧೋನಿ ಧರಿಸಿದ್ದ ಗ್ಲೌವ್ಸ್ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸಚಿವರೊಬ್ಬರು ಧೋನಿ ವಿರುದ್ಧ ಕಿಡಿಕಾರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಎಂಎಸ್ ಧೋನಿ ಧರಿಸಿದ್ದ ಗ್ಲೌವ್ಸ್ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸಚಿವರೊಬ್ಬರು ಧೋನಿ ವಿರುದ್ಧ ಕಿಡಿಕಾರಿದ್ದಾರೆ.
ಭಾರತೀಯ ಸೇನೆಯ ಬಲಿದಾನದ ಪ್ರತೀಕವಾದ 'ಕಠಾರಿ ಮುದ್ರೆ' ಲೋಗೋವನ್ನು ಧೋನಿ ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್ ಮೇಲೆ ಧರಿಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯವನ್ನಾಡಿದ್ದರು. ಬಳಿಕ ಧೋನಿ ಗ್ಲೌಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಧೋನಿ ದೇಶಪ್ರೇಮಕ್ಕೆ ಮತ್ತು ಸೇನೆಯ ಮೇಲಿನ ಗೌರವಕ್ಕೆ ವ್ಯಾಪಕ ಪ್ರಶಂಸೆ ಕೂಡ ವ್ಯಕ್ತವಾಗಿತ್ತು. ಆದರೆ ಐಸಿಸಿ ಮಾತ್ರ ಧೋನಿ ಗ್ಲೌಸ್ ಬದಲಿಸುವಂತೆ ಬಿಸಿಸಿಐಗೆ ಸಲಹೆ ನೀಡಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಕೂಡ ಧೋನಿ ಗ್ಲೌಸ್ ಕುರಿತು ಆಕ್ಷೇಪ ಎತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಫವಾಜ್ ಹುಸೇನ್, 'ಎಂ ಎಸ್‌ ಧೋನಿ ಇಂಗ್ಲೆಂಡ್‌ ಗೆ ತೆರಳಿರುವುದು ಕ್ರಿಕೆಟ್‌ ಆಡಲಿಕ್ಕೆ ಹೊರತು ಮಹಾಭಾರತ ಯುದ್ಧ ಮಾಡಲಿಕ್ಕಲ್ಲ. ಭಾರತೀಯ ಮಾಧ್ಯಮಗಳಲ್ಲಿ ಎಂತಹ ವಿಡಂಬನಾತ್ಮಕ ಚರ್ಚೆ, ಭಾರತೀಯ ಮಾಧ್ಯಮದ ಒಂದು ವಿಭಾಗವು ಯುದ್ಧದ ಬಗ್ಗೆ ತುಂಬಾ ಗೀಳನ್ನು ಹೊಂದಿದೆ. ಹಾಗಾಗಿ, ಅವರನ್ನು ಸಿರಿಯಾ, ಅಫ್ಘಾನಿಸ್ತಾನ ಹಾಗೂ ರವಾಂಡ್ ಗೆ ಕೂಲಿ ಸೈನಿಕರನ್ನಾಗಿ ಕಳುಹಿಸಬೇಕು. ಮೂರ್ಖರು.!" ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com