ಬೆನ್ ಸ್ಟೋಕ್ಸ್ ಕ್ಯಾಚ್ ಅನ್ನೂ ಮೀರಿಸುವಂತಿದೆ ಶೆಲ್ಡನ್ ಕಾಟ್ರೆಲ್ ಹಿಡಿದ ಕ್ಯಾಚ್!

ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶೆಲ್ಡನ್ ಕಾಟ್ರೆಲ್ ಹಿಡಿದ ಕ್ಯಾಚ್ ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ.

Published: 07th June 2019 12:00 PM  |   Last Updated: 07th June 2019 12:09 PM   |  A+A-


Watch: Sheldon Cottrell Takes Unbelievable Catch To Dismiss Steve Smith

ಶೆಲ್ಡನ್ ಕಾಟ್ರೆಲ್ ಕ್ಯಾಚ್

Posted By : SVN SVN
Source : Online Desk
ನಾಟಿಂಗ್ ಹ್ಯಾಮ್: ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶೆಲ್ಡನ್ ಕಾಟ್ರೆಲ್ ಹಿಡಿದ ಕ್ಯಾಚ್ ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ.

ಹೌದು.. ನಿನ್ನೆ ಆಸ್ಟ್ರೇಲಿಯಾ ಹಾಗೂ ವೆಸ್ಟ್‌ಇಂಡೀಸ್ ನಡುವಣ ಪಂದ್ಯದಲ್ಲಿ ಟೂರ್ನಿಯ ಅದ್ಭುತ ಕ್ಯಾಚ್ ವೊಂದು ದಾಖಲಾಗಿದೆ.  ವೆಸ್ಟ್‌ಇಂಡೀಸ್ ನ ಎಡಗೈ ವೇಗಿ ಶೆಲ್ಡನ್ ಕಾಟ್ರೆಲ್ ಹಿಡಿದಿರುವ ಈ ಅದ್ಭುತ ಕ್ಯಾಚ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. 

ಆಸ್ಟ್ರೇಲಿಯಾ ಇನ್ನಿಂಗ್ಸ್ ವೇಳೆಯಲ್ಲಿ ಕಾರ್ಲೊಸ್ ಬ್ರಾತ್ ವೇಟ್ ಎಸೆದ 47ನೇ ಓವರ್ ನಲ್ಲಿ ಈ ಕ್ಯಾಚ್ ಸಂಭವಿಸಿದ್ದು, ಅದಾಗಲೇ ಅರ್ಧಶತಕ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಸ್ಟೀವ್ ಸ್ಮಿತ್ ಬ್ರಾಥ್ ವೇಟ್ ಎಸೆದ ಪ್ರಥಮ ಎಸೆತವನ್ನು ಸಿಕ್ಸರ್ ನತ್ತ ಸಿಡಿಸಿದರು. ಚೆಂಡು ಇನ್ನೇನು ಸಿಕ್ಸರ್ ಹೋಗಿಯೇ ಬಿಟ್ಟಿತು ಎನ್ನುವಾಗಲೇ ಬೌಂಡರಿ ಗೆರೆ ಬಳಿ ಚಮತ್ಕಾರದ ರೀತಿಯಲ್ಲಿ ಶೆಲ್ಡನ್ ಕಾಟ್ರೆಲ್ ಚೆಂಡನ್ನು ಹಿಡಿತಕ್ಕೆ ಪಡೆದರು.

ಬೌಂಡರಿ ಗೆರೆ ಬಳಿ ಗಾಳಿಯಲ್ಲಿ ಹಾರಿದ ಕಾಟ್ರೆಲ್ ಒಂದು ಕೈಯಲ್ಲಿ ಕ್ಯಾಚ್ ಹಿಡಿದು  ಇನ್ನೇನು ಸಮತೋಲನ ತಪ್ಪಿ ಬೌಂಡರಿ ಗೆರೆ ದಾಟುತ್ತಿದ್ದೇನೆ ಎನ್ನುವಷ್ಟರಲ್ಲಿ ಚೆಂಡನ್ನು ಮೇಲಕ್ಕೆ ಎಸೆದರು. ಬಳಿಕ ಬೌಂಡರಿ ಗೆರೆಯಿಂದ ಒಳಗೆ ಬಂದು ಮೈದಾನದೊಳಗೆ ನುಗ್ಗಿ ಚೆಂಡನ್ನು ಹಿಡಿದರು. ಆ ಮೂಲಕ ಸ್ಮಿತ್ ಯಾರೂ ಊಹಿಸದ ರೀತಿಯಲ್ಲಿ ಔಟ್ ಆಗಿ ಭಾರವಾದ ಮನಸ್ಸಿನಿಂದಲೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಅಂತೆಯೇ  ಬಳಿಕ ತಮ್ಮ ಎಂದಿನ ಸೆಲ್ಯೂಟ್ ಶೈಲಿಯಲ್ಲಿ ಸಂಭ್ರಮಾಚರಿಸುವ ಮೂಲಕ ಕಾಟ್ರೆಲ್ ಗಮನ ಸೆಳೆದರು. 

ಇದೀಗ ಕಾಟ್ರೆಲ್ ಹಿಡಿದ ಕ್ಯಾಚ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಈ ಮೊದಲು ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್‌ ನ ಬೆನ್ ಸ್ಟೋಕ್ಸ್ ಅತ್ಯದ್ಭುತ ಕ್ಯಾಚ್ ಹಿಡಿದಿದ್ದೂ ಕೂಡ ಸುದ್ದಿಗೆ ಗ್ರಾಸವಾಗಿತ್ತು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp