ಕ್ರಿಕೆಟ್: 2020ರ ಟೀಂ ಇಂಡಿಯಾದ ನ್ಯೂಜಿಲೆಂಡ್ ಪ್ರವಾಸದ ವೇಳಾ ಪಟ್ಟಿ ಪ್ರಕಟ!

2020ರ ಟೀಂ ಇಂಡಿಯಾದ ನ್ಯೂಜಿಲೆಂಡ್ ಪ್ರವಾಸದ ವೇಳಾ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: 2020ರ ಟೀಂ ಇಂಡಿಯಾದ ನ್ಯೂಜಿಲೆಂಡ್ ಪ್ರವಾಸದ ವೇಳಾ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.
ಜನವರಿ 24ರಿಂದ ಭಾರತ ತಂಡದ ನ್ಯೂಜಿಲೆಂಡ್ ಪ್ರವಾಸ ಆರಂಭಗೊಳ್ಳಲ್ಲಿದ್ದು, ಪ್ರವಾಸದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಐದು ಪಂದ್ಯಗಳ ಟಿ20 ಸರಣಿ, 3 ಏಕದಿನ ಪಂದ್ಯಗಳ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿವೆ. ಇದೇ ಮೊದಲ ಬಾರಿಗೆ ಬಿಸಿಸಿಐ 5 ಪಂದ್ಯಗಳ ಟಿ20 ಸರಣಿಯನ್ನ ಆಯೋಜಿಸಿರುವುದು ವಿಶೇಷವಾಗಿದೆ. 
ಭಾರತದ ನ್ಯೂಜಿಲೆಂಡ್ ಪ್ರವಾಸದ ವೇಳಾ ಪಟ್ಟಿ ಇಂತಿದೆ.
ಟಿ-20 ಸರಣಿ: ಜನವರಿ 24 ರಿಂದ ಫೆಬ್ರವರಿ 02
ಜನವರಿ 24, ಮೊದಲ ಟಿ20 ಪಂದ್ಯ, ಆಕ್ಲೆಂಡ್
ಜನವರಿ 26, 2ನೇ ಟಿ20 ಪಂದ್ಯ, ಆಕ್ಲೆಂಡ್
ಜನವರಿ 29, 3ನೇ ಟಿ20 ಪಂದ್ಯ, ಹ್ಯಾಮಿಲ್ಟನ್
ಜನವರಿ 31, 4ನೇ ಟಿ20 ಪಂದ್ಯ, ವೆಲ್ಲಿಂಗ್ಟನ್
ಫೆಬ್ರವರಿ 02, 5ನೇ ಟಿ20 ಪಂದ್ಯ, ತೌರಂಗ
ಏಕದಿನ ಸರಣಿ: ಫೆಬ್ರವರಿ 05 ರಿಂದ ಫೆಬ್ರವರಿ 11
ಫೆಬ್ರವರಿ 05, ಮೊದಲ ಏಕದಿನ ಪಂದ್ಯ, ಹ್ಯಾಮಿಲ್ಟನ್
ಫೆಬ್ರವರಿ 08, 2ನೇ ಏಕದಿನ ಪಂದ್ಯ, ಆಕ್ಲೆಂಡ್
ಫೆಬ್ರವರಿ 11, 3ನೇ ಏಕದಿನ ಪಂದ್ಯ, ತೌರಂಗ
ಟೆಸ್ಟ್ ಸರಣಿ: 
ಫೆಬ್ರವರಿ 21 ರಿಂದ 25, ವೆಲ್ಲಿಂಗ್ಟನ್
ಫೆಬ್ರವರಿ 29 ರಿಂದ ಮಾ.04, ಕ್ರೈಸ್ಟ್ ಚರ್ಚ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com