ಐಸಿಸಿ ವಿಶ್ವಕಪ್ 2019: ಆಸಿಸ್ ಬೌಲರ್ ಗಳ ಅಟ್ಟಾಡಿಸಿದ ಭಾರತ, ಫಿಂಚ್ ಪಡೆಗೆ ಗೆಲ್ಲಲು ಬೃಹತ್ 353 ರನ್ ಗಳ ಗುರಿ

ಪ್ರಬಲ ಆಸ್ಟ್ರೇಲಿಯಾ ತಂಡದ ಬೌಲರ್ ಗಳ ಬೆವರು ಇಳಿಸಿದ ಭಾರತೀಯ ಬ್ಯಾಟ್ಸ್ ಮನ್ ಗಳು ಆ್ಯರಾನ್ ಫಿಂಚ್ ಪಡೆಗೆ ಗೆಲ್ಲಲು ಬೃಹತ್ 353ರನ್ ಗುರಿ ನೀಡಿದೆ.
ಭಾರತದ ಬ್ಯಾಟಿಂಗ್ ವೈಖರಿ
ಭಾರತದ ಬ್ಯಾಟಿಂಗ್ ವೈಖರಿ
ಲಂಡನ್: ಪ್ರಬಲ ಆಸ್ಟ್ರೇಲಿಯಾ ತಂಡದ ಬೌಲರ್ ಗಳ ಬೆವರು ಇಳಿಸಿದ ಭಾರತೀಯ ಬ್ಯಾಟ್ಸ್ ಮನ್ ಗಳು ಆ್ಯರಾನ್ ಫಿಂಚ್ ಪಡೆಗೆ ಗೆಲ್ಲಲು ಬೃಹತ್ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಉತ್ತಮ ಬುನಾದಿ ಹಾಕಿಕೊಟ್ಟಿತು. ನಿಧಾನಗತಿಯ ಆರಂಭ ಪಡೆದ ಈ ಜೋಡಿ ಕ್ರಮೇಣ ರನ್ ವೇಗವನ್ನು ಹೆಚ್ಚಿಸಿಕೊಂಡರು. ನೋಡ ನೋಡುತ್ತಿದ್ದಂತೆಯೇ ಇಬ್ಬರೂ ಆಟಗಾರರೂ ತಲಾ ಅರ್ಧಶತಕ ಗಳಿಸಿ ತಂಡಕ್ಕೆ ಶತಕದ ಜೊತೆಯಾಟ ನೀಡಿದರು. ಈ ವೇಳೆ 57 ರನ್ ಗಳಿಸಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಕಾಲ್ಟರ್ ನೈಲ್ ವಿಕೆಟ್ ಒಪ್ಪಿಸಿದರು.
ಬಳಿಕ ನಾಯಕ ವಿರಾಟ್ ಕೊಹ್ಲಿ ಜೊತೆಗೂಡಿದ ಶಿಖರ್ ಧವನ್ ಆಕರ್ಷಕ ಶತಕ ಸಿಡಿಸಿದರು. ಕೇವಲ 96 ಎಸೆತಗಳಲ್ಲಿ ಶತಕ ಸಿಡಿಸಿದ ಧವನ್ 117 ರನ್ ಗಳಿಸಿ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಹಾರ್ದಿಕ್ ಪಾಂಡ್ಯಾ ಜೊತೆಗೂಡಿದ ಕೊಹ್ಲಿ ಅಕ್ಷರಶಃ ಆಸಿಸ್ ಬೌಲರ್ ಗಳ ಬೆಂಡೆತ್ತಿದರು. ಭರ್ಜರಿ 81 ರನ್ ಗಳ ಜೊತೆಯಾಟವಾಡಿದ ಈ ಜೋಡಿ, ತಂಡದ ರನ್ ಗಳನ್ನು 300ರ ಗಡಿ ದಾಟಿಸಿತು. ಈ ಹಂತದಲ್ಲಿ 48 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದ ಪಾಂಡ್ಯಾ, ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಫಿಂಚ್ ಗೆ ಕ್ಯಾಚಿತ್ತು ಹೊರ ನಡೆದರು.
ಬಳಿಕ ಕೊಹ್ಲಿ ಜೊತೆಗೂಡಿದ ಧೋನಿ 27 ರನ್ ಗಳಿಸಿ ಅಂತಿಮ ಓವರ್ ನಲ್ಲಿ ಔಟ್ ಆದರು. ಧೋನಿ ಬೆನ್ನ ಹಿಂದೆಯೇ ಕೊಹ್ಲಿ ಕೂಡ 82 ರನ್ ಗಳಿಸಿ ಔಟ್ ಆದರು. ಅಂತಿಮವಾಗಿ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿ, ಆಸಿಸ್ ಗೆ ಗೆಲ್ಲಲು 353 ರನ್ ಗಳ ಬೃಹತ್ ಗುರಿ ನೀಡಿದೆ.
ಇನ್ನು ಆಸಿಸ್ ಪರ ಮಾರ್ಕಸ್ ಸ್ಟಾಯಿನ್ಸ್ 2 ವಿಕೆಟ್ ಪಡೆದರೆ, ಪ್ಯಾಟ್ ಕಮಿನ್ಸ್, ಸ್ಟಾರ್ಕ್ ಮತ್ತು ನಾಥನ್ ಕಾಲ್ಟರ್ ನೈಲ್ ತಲಾ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com