Source : Online Desk
ಕಾರ್ಡಿಫ್: ವಿಶ್ವಕಪ್ ಟೂರ್ನಿಯಲ್ಲಿ ತಪ್ಪಾದ ತೀರ್ಪುಗಳಿಂದ ಅಂಪೈರ್ ಗಳು ಸುದ್ದಿಯಾಗಿದ್ದಾರೆ. ಈ ಮಧ್ಯೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಜೇಸನ್ ರಾಯ್ ಅಂಪೈರ್‌ಗೆ ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೇಸನ್ ರಾಯ್ ಶತಕ ಸಿಡಿಸಿದ ಸಂಭ್ರಮದಲ್ಲಿ ಚೆಂಡನ್ನು ನೋಡಿಕೊಂಡು ಬಂದು ಅಂಪೈರ್ ಜೋಯೆಲ್ ವಿಲ್ಸನ್ ಗೆ ಡಿಕ್ಕಿ ಹೊಡೆದಿದ್ದಾರೆ.
ಈ ವೇಳೆ ಜೋಯೆಲ್ ವಿಲ್ಸನ್ ಅವರು ನೆಲಕ್ಕೆ ಕುಸಿದು ಬಿದ್ದರು. ಕೂಡಲೇ ನೆಲಕ್ಕೆ ಬಿದ್ದ ಅಂಪೈರ್ ರನ್ನು ರಾಯ್ ಮೇಲಕ್ಕೆ ಎತ್ತಿದರು. ಅದೃಷ್ಟವಶಾತ್ ವಿಲ್ಸನ್ ಗೆ ಯಾವುದೇ ಗಾಯಗಳಾಗಿಲ್ಲ.
ಒಟ್ಟಿನಲ್ಲಿ ರೋಚಕದ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡ 386 ರನ್ ಪೇರಿಸಿದ್ದು ಬಾಂಗ್ಲಾದೇಶ 280 ರನ್ ಗಳಿಗೆ ಆಲೌಟ್ ಆಗಿ 106 ರನ್ ಗಳಿಂದ ಸೋಲು ಕಂಡಿದೆ.