ಎಂಎಸ್ ಧೋನಿ
ಎಂಎಸ್ ಧೋನಿ

'ಬಲಿದಾನ ಮುದ್ರೆ' ಗ್ಲೌಸ್‌ ಹಾಕಿಕೊಳ್ಳುವಂತೆ ಸಹ ಆಟಗಾರರಿಂದ ಧೋನಿಗೆ ಒತ್ತಾಯ! ಇಂದು ಏನಾಗಲಿದೆ?

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 'ಕಠಾರಿ ಮುದ್ರೆ' ಹೊಂದಿರುವ ಗ್ಲೌಸ್ ಮೂಲಕವೇ ವಿಕೆಟ್‌ ಕೀಪಿಂಗ್‌ ಮುಂದುವರಿಸುವಂತೆ ಟೀಂ ಇಂಡಿಯಾ ಸಹ ಆಟಗಾರರು ಮಹೇಂದ್ರ ಸಿಂಗ್‌ ಧೋನಿಗೆ ಒತ್ತಾಯಿಸಿದ್ದಾರೆ.
ಲಂಡನ್‌: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 'ಕಠಾರಿ ಮುದ್ರೆ' ಹೊಂದಿರುವ ಗ್ಲೌಸ್ ಮೂಲಕವೇ ವಿಕೆಟ್‌ ಕೀಪಿಂಗ್‌ ಮುಂದುವರಿಸುವಂತೆ ಟೀಂ ಇಂಡಿಯಾ ಸಹ ಆಟಗಾರರು ಮಹೇಂದ್ರ ಸಿಂಗ್‌ ಧೋನಿಗೆ ಒತ್ತಾಯಿಸಿದ್ದಾರೆಂದು ತಿಳಿದುಬಂದಿದೆ. 
ಬಲಿದಾನದ ಮುದ್ರೆ ಹೊಂದಿರುವ ಗ್ಲೌಸ್‌ಗಳನ್ನು ಬಳಸುವುದು ಅಥವಾ ಬಿಡುವುದು ಅಂತಿಮವಾಗಿ ಧೋನಿ ಅವರಿಗೆ ಬಿಟ್ಟಿದ್ದು, ಆದರೆ ಎಂಎಸ್‌ ಧೋನಿ ಈ ವಿಷಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರು ಸಹ ಆಟಗಾರರು ಬೆಂಬಲಿಸಲಿದ್ದಾರೆ ಎಂದು ಭಾರತ ತಂಡದ ಮೂಲಗಳಿಂದ ತಿಳಿದುಬಂದಿದೆ. 
ಭಾರತೀಯ ಯೋಧರ ಬಲಿದಾನಕ್ಕೆ ಪ್ರತೀಕವಾಗಿ ಟೀಂ ಇಂಡಿಯಾದ ಹಿರಿಯ ಆಟಗಾರ ಎಂಎಸ್ ಧೋನಿ ಕೀಪಿಂಗ್ ಗ್ಲೌಸ್ ಮೇಲೆ ಭಾರತೀಯ ಸೇನೆಯ ಚಿಹ್ನೆ ಬಳಿಸಿ ವಿಶೇಷ ಗೌರವ ಸಲ್ಲಿಕೆ ಮಾಡಿದ್ದು ಇದಕ್ಕೆ ತೀವ್ರ ಮಚ್ಚುಗೆ ವ್ಯಕ್ತವಾಗಿತ್ತು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಐಸಿಸಿ ಬ್ಯಾಡ್ಜ್ ತೆಗೆಯುವಂತೆ ಧೋನಿಗೆ ಹಾಗೂ ಬಿಸಿಸಿಐಗೆ ಸೂಚಿಸಿತ್ತು.

ಕಳೆದ ಬುಧವಾರ ಸೌಥ್ಯಾಂಪ್ಟನ್ ನ ರೋಸ್ ಬಾಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಎಂಎಸ್ ಧೋನಿ ವಿಶೇಷ ಗ್ಲೌಸ್ ಧರಿಸಿದ್ದರು. ಈ ಗ್ಲೌಸ್ ಮೇಲೆ ಭಾರತೀಯ ಸೇನೆಯ ಬಲಿದಾನದ ಲೋಗೋ ಅಚ್ಚು ಹಾಕಲಾಗಿತ್ತು. ಪಂದ್ಯದ ಆರಂಭದಿಂದಲೂ ಇದು ಯಾರ ಕಣ್ಣಿಗೂ ಬಿದ್ದಿರಲಿಲ್ಲ.

ಆದರೆ ಧೋನಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಪೆಹ್ಲುಕ್ವಾಯೋ ಅವರನ್ನು ಸ್ಟಂಪೌಟ್ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಟಿವಿ ರೀಪ್ಲೆ ವೇಳೆ ಧೋನಿ ಸ್ಟಂಪೌಂಟ್ ಅನ್ನು ಜೂಮ್ ಮಾಡಿ ತೋರಿಸುವಾಗ ಧೋನಿ ಗ್ಲೌಸ್ ಮೇಲಿದ್ದ ಸೈನಿಕರ ಬಲಿದಾನದ ಲೋಗೋ ಕೂಡ ಕಂಡಿದೆ. ಕೂಡಲೇ ಧೋನಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ಕೂಡ ವ್ಯಕ್ತವಾಗಿದೆ.

ಇನ್ನು ತಮ್ಮ ಅದ್ಬುತ ಕ್ರಿಕೆಟ್ ಪ್ರದರ್ಶನದಿಂದಲೇ ಧೋನಿ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಿದ್ದರು. ಅಲ್ಲದೆ ಧೋನಿ ಅಗ್ರಾದಲ್ಲಿ ಕೆಲ ದಿನಗಳ ಕಾಲ ಸೇನಾ ತರಬೇತಿಯಲ್ಲಿ ಕೂಡ ಪಾಲ್ಗೊಂಡಿದ್ದರು.

Related Stories

No stories found.

Advertisement

X
Kannada Prabha
www.kannadaprabha.com