ಗಿಲ್ ಕ್ರಿಸ್ಟ್-ಹೇಡನ್ ದಾಖಲೆ ಸರಿಗಟ್ಟಿದ ಧವನ್-ರೋಹಿತ್ ಶರ್ಮಾ ಜೋಡಿ!

ಐಸಿಸಿ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಪ್ರಸ್ತುತ ಅತ್ಯುತ್ತಮ ಸ್ಥಿತಿಯಲ್ಲಿದ್ದು, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ರೋಹಿತ್ ಶರ್ಮಾ - ಶಿಖರ್ ಧವನ್ ಜೋಡಿ
ರೋಹಿತ್ ಶರ್ಮಾ - ಶಿಖರ್ ಧವನ್ ಜೋಡಿ
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಪ್ರಸ್ತುತ ಅತ್ಯುತ್ತಮ ಸ್ಥಿತಿಯಲ್ಲಿದ್ದು, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ವಿರಾಟ್ ಕೊಹ್ಲಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಉಭಯ ಬ್ಯಾಟ್ಸ್ ಮನ್ ಗಳು ಬ್ಯಾಟ್ ಬೀಸುತ್ತಿದ್ದು, ಇಬ್ಬರೂ ತಲಾ ಅರ್ಧ ಶತಕದ ಮೂಲಕ ಭಾರತದ ಬ್ಯಾಟಿಂಗ್ ಉತ್ತಮ ಬುನಾದಿ ಹಾಕಿಕೊಟ್ಟಿದ್ದಾರೆ.
ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಭಾರತಕ್ಕೆ ನಿಧಾನಗತಿಯ ಆರಂಭ ಒದಗಿಸಿದರೂ, ಉತ್ತಮ ಆರಂಭ ನೀಡಿದ್ದಾರೆ. ಆಸಿಸ್ ವೇಗಿಗಳನ್ನು ರಕ್ಷಣಾತ್ಮಕವಾಗಿ ಎದುರಿಸಿದ ಇಬ್ಬರೂ ಆಟಗಾರರೂ ಅನಗತ್ಯ ದೊಡ್ಡ ಹೊಡೆತಕ್ಕೆ ಕೈ ಹಾಕದೇ ರಕ್ಷಣಾತ್ಮಕ ಆಟದ ಮೂಲಕ ಒಂದೊಂದೇ ರನ್ ಗಳನ್ನು ಕಲೆಹಾಕಿ ಭಾರತದ ಉತ್ತಮ ಸ್ಥಿತಿಗೆ ಕಾರಣರಾಗಿದ್ದಾರೆ. ಇಬ್ಬರೂ ಆಟಗಾರರ ಜುಗಲ್ ಬಂದಿ ಆಟಕ್ಕೆ ಆಸಿಸ್ ಬೌಲರ್ ಗಳು ಹೈರಾಣಾಗಿ ಹೋಗಿದ್ದು, ಭಾರತದ ವಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ಧವನ್ 53 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರೆ, ರೋಹಿತ್ ಶರ್ಮಾ 61 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆ ಮೂಲಕ ಈ ಜೋಡಿ ಶತಕದ ಜೊತೆಯಾಟವಾಡಿತು.
ಗಿಲ್ ಕ್ರಿಸ್ಟ್-ಹೇಡನ್ ದಾಖಲೆ ಸರಿಗಟ್ಟಿದ ಧವನ್-ರೋಹಿತ್ ಶರ್ಮಾ ಜೋಡಿ
ಇನ್ನು ಶತಕದ ಜೊತೆಯಾಟದ ಮೂಲಕ ರೋಹಿತ್ ಮತ್ತು ಧವನ್ ಜೋಡಿ ಆಸಿಸ್ ಬ್ಯಾಟಿಂಗ್ ದಂತಕಥೆಗಳಾದ ಆ್ಯಡಂ ಗಿಲ್ ಕ್ರಿಸ್ಟ್ ಮತ್ತು ಮ್ಯಾಥ್ಯೂ ಹೇಡನ್ ದಾಖಲೆಯನ್ನು ಸರಿ ಗಟ್ಟಿದ್ದು, ಹಾಲಿ ಪಂದ್ಯದ ಶತಕದ ಜೊತೆಯಾಟ ಈ ಜೋಡಿಯ 16ನೇ ಶತಕದ ಜೊತೆಯಾಟವಾಗಿದೆ. ಹೇಡನ್-ಗಿಲ್ ಕ್ರಿಸ್ಟ್ ಜೋಡಿ ಕೂಡ ಇಷ್ಟೇ ಪ್ರಮಾಣದ ಶತಕದ ಜೊತೆಯಾಟವಾಡಿತ್ತು. ಇನ್ನು ಅತೀ ಹೆಚ್ಚು ಶತಕದ ಜೊತೆಯಾಟವಾಡಿರುವ ಆರಂಭಿಕ ಆಟಗಾರರ ಜೋಡಿ ಪಟ್ಟಿಯಲ್ಲಿ ಭಾರತದ ಕ್ರಿಕೆಟ್ ದಂತಕಥೆಗಳಾದ ಸಚಿನ್ ಮತ್ತು ಗಂಗೂಲಿ ಜೋಡಿ ಅಗ್ರ ಸ್ಥಾನದಲ್ಲಿದ್ದು, ಈ ಜೋಡಿ 21 ಬಾರಿ ಶತಕದ ಜೊತೆಯಾಟವಾಡಿದೆ.
ಇತ್ತೀಚಿನ ವರದಿಗಳು ಬಂದಾಗ ಭಾರತ ತಂಡ 24 ಓವರ್ ಗಳ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದೆ. 71 ರನ್ ಗಳಿಸಿರುವ ಶಿಖರ್ ಧವನ್ ಮತ್ತು 1 ರನ್ ಗಳಿಸಿರುವ ಕೊಹ್ಲಿ ಕ್ರೀಸ್ ನಲ್ಲಿದ್ದು, 57 ರನ್ ಗಳಿಸಿದ್ದ ರೋಹಿತ್ ಶರ್ಮಾ ಕಾಲ್ಟರ್ ನೈಲ್ ಗೆ ವಿಕೆಟ್ ಒಪ್ಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com