ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ಯುವರಾಜ್ ಸಿಂಗ್ ವಿದಾಯ!

2011ರ ವಿಶ್ವಕಪ್ ವಿಜೇತ ಟೀಂ ಇಂಡಿಯಾ ತಂಡದ ಸ್ಟಾರ್ ಆಟಗಾರ, ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ.

Published: 10th June 2019 12:00 PM  |   Last Updated: 10th June 2019 02:25 AM   |  A+A-


Yuvraj Singh

ಯುವರಾಜ್ ಸಿಂಗ್

Posted By : VS VS
Source : Online Desk
ಮುಂಬೈ: 2011ರ ವಿಶ್ವಕಪ್ ವಿಜೇತ ಟೀಂ ಇಂಡಿಯಾ ತಂಡದ ಸ್ಟಾರ್ ಆಟಗಾರ, ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. 

32 ವರ್ಷದ ಯುವರಾಜ್ ಸಿಂಗ್ ಇತ್ತೀಚಿನ ಕೆಲ ವರ್ಷಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರೂ ವಿಫಲರಾಗಿದ್ದರು. ಕೊನೆಯ ಹಂತದಲ್ಲಿ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗುವ ಭರವಸೆಯಲ್ಲಿದ್ದ ಯುವಿಗೆ ನಿರಾಸೆಯಾಗಿತ್ತು. ಈ ಎಲ್ಲಾ ಕಾರಣಗಳಿಂದ ಯುವಿ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ.

ಯುವರಾಜ್ ಸಿಂಗ್ 2000ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 304 ಏಕದಿನ ಪಂದ್ಯಗಳನ್ನಾಡಿದ್ದು 8,701 ರನ್ ಹೊಡೆದಿದ್ದಾರೆ. ಇನ್ನು 52 ಅರ್ಧ ಶತಕ ಹಾಗೂ 14 ಶತಕ ಸಿಡಿಸಿದ್ದಾರೆ.

2003ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನಾಡಿದ್ದರು. 40 ಟೆಸ್ಟ್ ಆಡಿರುವ ಯುವಿ 1900 ರನ್ ಬಾರಿಸಿದ್ದಾರೆ. ಇನ್ನು 11 ಅರ್ಧ ಶತಕ ಹಾಗೂ 3 ಶತಕ ಬಾರಿಸಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp