ಚೆಂಡು ವಿರೂಪದ ಶಂಕೆ: ಪ್ರತಿ ಪಂದ್ಯದಲ್ಲೂ ಝಂಪಾ ಹ್ಯಾಂಡ್‌-ವಾರ್ಮರ್ಸ್‌ ಬಳಸುತ್ತಾರೆ- ಫಿಂಚ್‌

ಭಾರತದ ವಿರುದ್ಧ ಐಸಿಸಿ ವಿಶ್ವಕಪ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್‌ ಆ್ಯಡಂ ಝಂಪಾ ಚೆಂಡು ವಿರೂಪ ಮಾಡಿದ್ದರೆಂಬ ಅನುಮಾನ ವ್ಯಕ್ತವಾಗಿತ್ತು. ಇದಕ್ಕೆ ಆಸೀಸ್‌ ನಾಯಕ ಆ್ಯರೋನ್‌ ಫಿಂಚ್ ಸ್ಪಷ್ಟನೆ ನೀಡಿದ್ದಾರೆ.
ಆ್ಯಡಂ ಝಂಪಾ
ಆ್ಯಡಂ ಝಂಪಾ
ಲಂಡನ್: ಭಾರತದ ವಿರುದ್ಧ ಐಸಿಸಿ ವಿಶ್ವಕಪ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್‌ ಆ್ಯಡಂ ಝಂಪಾ ಚೆಂಡು ವಿರೂಪ ಮಾಡಿದ್ದರೆಂಬ ಅನುಮಾನ ವ್ಯಕ್ತವಾಗಿತ್ತು. ಇದಕ್ಕೆ ಆಸೀಸ್‌ ನಾಯಕ ಆ್ಯರೋನ್‌ ಫಿಂಚ್  ಸ್ಪಷ್ಟನೆ ನೀಡಿದ್ದಾರೆ. 
ಭಾನುವಾರ ಇಲ್ಲಿನ ದಿ ಓವಲ್‌ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಐಸಿಸಿ ವಿಶ್ವಕಪ್‌ ಟೂರ್ನಿಯ 14 ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ವೇಳೆ ಆ್ಯಡಂ ಝಂಪಾ  ಪದೇ-ಪದೇ ಜೇಬಿನಲ್ಲಿ ಕೈಇಟ್ಟು ಚೆಂಡನ್ನು ಉಜ್ಜುತ್ತಿದ್ದರು. ಇದು ಚೆಂಡು ವಿರೂಪಗೊಳಿಸುತ್ತಿದ್ದಾರೆಂಬ ಅನುಮಾನ ಕಾಡಿತ್ತು. 
ಈ ಬಗ್ಗೆ ಪ್ರತಿಕ್ರಿಯಿಸಿದ ಫಿಂಚ್‌, " ಕೆಲವು ಫೋಟೊಗಳಲ್ಲಿ ಈ ಕುರಿತು ನೋಡಿದ್ದೆ. ಆ್ಯಡಂ ಝಂಪಾ ಅವರು ಸಾಮಾನ್ಯವಾಗಿ ಪ್ರತಿಯೊಂದು ಪಂದ್ಯದಲ್ಲೂ ತಮ್ಮ ಜೇಬಿನಲ್ಲಿ ಹ್ಯಾಂಡ್‌-ವಾರ್ಮರ್ಸ್‌ ಇಟ್ಟುಕೊಂಡಿರುತ್ತಾರೆ. ಇದನ್ನು ನಾನೇ ನೋಡಿದ್ದೇನೆ. ಇದರ ಬಗ್ಗೆ ಹೆಚ್ಚು ಮಾತನಾಡಲ್ಲ. ಏಕೆಂದರೆ ಅವರು ಹ್ಯಾಂಡ್‌ ವಾರ್ಮರ್ಸ್‌ ಬಳಸುತ್ತಾರೆಂದು ನನಗೆ ಗೊತ್ತಿದೆ. 
ಮೈದಾನದಲ್ಲಿಯೂ ತೀರ್ಪುಗಾರರು ಇದರ ಬಗ್ಗೆ ಪ್ರಶ್ನಿಸಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಬಗ್ಗೆ ಝಂಪಾ ಅವರನ್ನು ಪ್ರಶ್ನಿಸುತ್ತಿದ್ದಾರೆ. 
ಚೆಂಡು ವಿರೂಪ ಪ್ರಕರಣದಿಂದಾಗಿ ಡೇವಿಡ್‌ ವಾರ್ನರ್‌ ಹಾಗೂ ಸ್ಟೀವನ್‌ ಸ್ಮಿತ್‌ ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೀಗ ಅವರು ಒಂದು ವರ್ಷದ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಭಾನುವಾರ ನಡೆದಿದ್ದ ಭಾರತದ ವಿರುದ್ಧದ ಪಂದ್ಯದಲ್ಲಿ ಸ್ಟೀವ್‌ ಸ್ಮಿತ್‌ ಅವರನ್ನು ಅಭಿಮಾನಿಗಳು ಚೀಟರ್ , ಚೀಟರ್‌ ಎಂದು ನಿಂದಿಸಿದ್ದರು. ಈ ವೇಳೆ ವಿರಾಟ್‌ ಕೊಹ್ಲಿ ಮಧ್ಯೆ ಪ್ರವೇಶಿಸಿ ಸ್ಮಿತ್‌ಗೆ ಬೆಂಬಲವಾಗಿ ನಿಂತರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com