ಚರ್ಚೆಗೆ ಗ್ರಾಸವಾಯ್ತು 'ಜಿಂಗ್ ಬೇಲ್ಸ್' ಪ್ರಕರಣ: ಬೇಲ್ಸ್ ಬೀಳದೆ ಐದು ಆಟಗಾರರಿಗೆ ಜೀವದಾನ, ಕಾರಣವೇನು?

ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ ಗೆ ಚೆಂಡು ತಗುಲಿದ್ದರೂ ಬೇಲ್ಸ್ ಬೀಳದ ಕಾರಣ ಐವರು ಬ್ಯಾಟ್ಸ್ ಮನ್ ಗಳು ಜೀವದಾನ ಪಡೆದಿರುವ ಪ್ರಕರಣ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ ಗೆ ಚೆಂಡು ತಗುಲಿದ್ದರೂ ಬೇಲ್ಸ್ ಬೀಳದ ಕಾರಣ ಐವರು ಬ್ಯಾಟ್ಸ್ ಮನ್ ಗಳು ಜೀವದಾನ ಪಡೆದಿರುವ ಪ್ರಕರಣ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. 
ವಿಶ್ವಕಪ್ ಟೂರ್ನಿ ಆರಂಭವಾಗಿ 10 ದಿನಗಳೇ ಕಳೆದಿದೆ. ಈ ವೇಳೆ ಹಲವು ರೋಚಕ ಸಂಗತಿಗಳು, ವಿವಾದಗಳು, ಆರೋಪ ಪ್ರತ್ಯಾರೋಪಗಳು ನಡೆದಿವೆ. ಇನ್ನೊಂದು ಸಂಗತಿ ಎಂದರೆ ಚೆಂಡು ವಿಕೆಟ್ ಬಡಿದರು ಬೇಲ್ಸ್ ಬೀಳದ ಕಾರಣ(ಜಿಂಗ್ ಬೇಲ್ಸ್) ಐವರು ಬ್ಯಾಟ್ಸ್ ಮನ್ ಗಳು ಜೀವದಾನ ಪಡೆದಿದ್ದಾರೆ. 
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಎಸೆತದಲ್ಲಿ ಡೇವಿಡ್ ವಾರ್ನರ್ ಬೌಲ್ಡ್ ಆಗಿದ್ದರು. ಆದರೆ ಬೇಲ್ಸ್ ಬೀಳದ ಕಾರಣ ನಾಟೌಟ್ ಆಗಿದ್ದರು. ಈ ಪ್ರರಕಣ ಇದೀಗ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಅದಿಲ್ ರಶೀದ್ ಬೌಲಿಂಗ್ ನಲ್ಲಿ ಕ್ವೀಂಟನ್ ಡಿಕಾಕ್ ಸಹ ಬೌಲ್ಡ್ ಆಗಿದ್ದರು. ಆದರೆ ಬೇಲ್ಸ್ ಬೀಳದ ಕಾರಣ ಅವರಿಗೆ ಜೀವದಾನ ಸಿಕ್ಕಿತ್ತು. ಇದರ ಬೆನ್ನಲ್ಲೇ ನ್ಯೂಜಿಲ್ಯಾಂಡ್ ತಂಡದ ವೇಗಿ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಶ್ರೀಲಂಕಾದ ದಿಮುತ್ ಕರುಣರತ್ನೆ ಸಹ ಬೌಲ್ಡ್ ಆಗಿದ್ದರು. ಅದೃಷ್ಟವಶಾತ್ ಬೇಲ್ಸ್ ಬೀಳದೆ ನಾಟೌಟ್ ಆಗಿದ್ದರು.
ಮತ್ತೊಂದು ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ಕ್ರಿಸ್ ಗೇಯ್ಲ್ ಸಹ ಬ್ಯಾಟ್ ಬೀಸಿದ್ದರು. ಚೆಂಡು ವಿಕೆಟ್ ಗೆ ಸವರಿಕೊಂಡು ಹೋಗಿತ್ತು. ಆದರೆ ಬೇಲ್ಸ್ ಬಿದ್ದಿರಲಿಲ್ಲ. ಇದರಿಂದ ಗೇಯ್ಲ್ ನಿಟ್ಟುಸಿರು ಬಿಟ್ಟಿದ್ದರು. ಅದೇ ರೀತಿ ಬೆನ್ ಸ್ಟೋಕ್ಸ್ ಎಸೆತದಲ್ಲಿ ಸೈಫುದ್ದೀನ್ ಸಹ ಔಟ್ ಆಗಬೇಕಿತ್ತು. ಆದರೆ ಬೇಲ್ಸ್ ವಿಕೆಟ್ ನಿಂದ ಕೆಲಗೆ ಬೀಳದೆ ನಾಟೌಟ್ ಆಗಿದ್ದರು. 
ಬೇಲ್ಸ್ ಮಾಡುವಾಗ ಕೆಲ ವಿಧಾನ ಪಾಲಿಸಬೇಕು. ಬೇಲ್ಸ್ ನ ದಪ್ಪ, ಉದ್ದ, ಅದು ವಿಕೆಟ್ ಮೇಲೆ ಇಟ್ಟಾಗ ಅದರ ತೂಕ ಇವೆಲ್ಲಾ ಪರಿಗಣನೆಗೆ ತೆಗೆದುಕೊಳ್ಳಬೇಕು. ಇವುಗಳಲ್ಲಿ ಕೆಲವೊಂದು ಲೋಪಗಳು ಆದಾಗ ಈ ರೀತಿಯ ಪ್ರಕರಣಗಳು ನಡೆಯುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com