ಕ್ರಿಕೆಟ್ ಅಭಿಮಾನಿಗಳಿಂದ 'ಚೋರ್ ಹೈ' ಘೋಷಣೆ: ಭಾರತ- ಆಸಿಸ್ ಪಂದ್ಯ ವೀಕ್ಷಣೆಗೆ ಬಂದ ಮಲ್ಯಗೆ ಮುಜುಗರ

ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿಸದೆ ಲಂಡನ್ ನಲ್ಲಿ ತಲೆ ಮರೆಸಿಕೊಂಡಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ನಿನ್ನೆ ತೀವ್ರ ಮುಜುಗರ ಸನ್ನಿವೇಶ ಎದುರಿಸಿದ್ದಾರೆ.
ವಿಜಯ್ ಮಲ್ಯ
ವಿಜಯ್ ಮಲ್ಯ
ಲಂಡನ್: ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿಸದೆ ಲಂಡನ್ ನಲ್ಲಿ ತಲೆ ಮರೆಸಿಕೊಂಡಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ನಿನ್ನೆ ತೀವ್ರ ಮುಜುಗರ ಸನ್ನಿವೇಶ ಎದುರಿಸಿದ್ದಾರೆ. 
ಆಸ್ಟ್ರೇಲಿಯಾ -ಭಾರತ ವಿಶ್ವಕಪ್ ಕ್ರಿಕೆಟ್ ಪಂದ್ಯ ವೀಕ್ಷಿಸಿ ಓವೆಲ್ ಮೈದಾನದಿಂದ ಹೊರಗೆ ಬಂದ ನಂತರ ಅವರ ಸುತ್ತ ಬರುತ್ತಿದ್ದ ಕ್ರಿಕೆಟ್ ಅಭಿಮಾನಿಗಳು ಚೋರ್  ಹೈ ( ನೀವು ಕಳ್ಳ ) ಎಂದು ಘೋಷಣೆ ಕೂಗಿದ್ದಾರೆ. ಕ್ರೀಡಾಂಗಣದ ಗೇಟ್ ನಿಂದ ಹೊರಗೆ ಬರುವವರೆಗೂ ಚೋರ್ ಚೋರ್ ಹೈ ಎಂದು ಕೂಗುವ ಮೂಲಕ ವಿಜಯ್ ಮಲ್ಯ ಅವರನ್ನು ಅವಮಾನಿಸಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ ವಿಜಯ್ ಮಲ್ಯ,  ನನ್ನ ತಾಯಿಗೆ ನೋಯಿಸುವುದಿಲ್ಲ ಎಂಬುದನ್ನು ಖಚಿತಪಡಿಸುತ್ತೇನ ಎಂದರು.
ಮಲ್ಯ ಸುತ್ತ ನೆರೆದಿದ್ದ ಚಿಕ್ಕಗುಂಪೊಂದು ಅವರನ್ನು ತಳ್ಳುತ್ತಾ ಚೋರ್ ಹೈ ಎಂದು ಕೂಗುವುದು ವಿಡಿಯೋದಲ್ಲಿ ಸೆರೆಯಾಗಿದೆ. ಒಬ್ಬ ವ್ಯಕ್ತಿಯಾಗಿ ನಿಮ್ಮ ದೇಶಕ್ಕೆ ಕ್ಷಮೆಯಾಚಿಸಿ ಎಂದು ಒಬ್ಬರು ಜೋರಾಗಿ ಕೂಗಿದ್ದಾರೆ. ಆದರೆ. ಮಲ್ಯ ಪ್ರತಿಕ್ರಿಯೆ ಸ್ಪಷ್ಟವಾಗಿ ಕೇಳಿಬಂದಿಲ್ಲ. 
ನಂತರ ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಪ್ರತಿಕ್ರಿಯಿಸಿರುವ ವಿಜಯ್ ಮಲ್ಯ, ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಬಂದಿದ್ದೇನೆ. ಜುಲೈ ತಿಂಗಳಲ್ಲಿ ವಿಚಾರಣೆ ಇದ್ದು, ಸಿದ್ದತಾ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. 
ಕ್ರೀಡಾಂಗಣದ ಒಳಗೆ ತಮ್ಮ ಮಗ ಸಿದ್ದಾರ್ಥ ಮಲ್ಯ ಜೊತೆಗೆ ಇರುವ ಪೋಟೋವನ್ನು ವಿಜಯ್ ಮಲ್ಯ ಶೇರ್ ಮಾಡಿದ್ದಾರೆ. 
2017ರಲ್ಲಿ ಭಾರತ- ದಕ್ಷಿಣ ಆಫ್ರಿಕಾ ನಡುವಣ ಚಾಂಫಿಯನ್ ಟ್ರೋಫಿ ಕ್ರಿಕೆಟ್ ಪಂದ್ಯದ ವೇಳೆಯೂ ಇದೇ ರೀತಿಯ ಮುಜುಗರ ಸನ್ನಿವೇಶವನ್ನು ವಿಜಯ್ ಮಲ್ಯ ಎದುರಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com