ಕೊಹ್ಲಿಯನ್ನು ಅಭಿನಂದನ್ ರೀತಿ ನಡೆಸಿಕೊಂಡ ವಿಡಿಯೋ ಹಾಕಿ ವಿಕೃತಿ; ಪಾಕಿಗಳ ಕೃತ್ಯಕ್ಕೆ ಭಾರೀ ಆಕ್ರೋಶ

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಇದೇ ಜೂನ್ 16ರಂದು ಟೀಂ ಇಂಡಿಯಾ ಪಂದ್ಯವನ್ನಾಡಲಿದ್ದು ಇದಕ್ಕೂ ಮುನ್ನ ಪಾಕಿಗರು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ವಿಂಗ್ ಕಮಾಂಡರ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಇದೇ ಜೂನ್ 16ರಂದು ಟೀಂ ಇಂಡಿಯಾ ಪಂದ್ಯವನ್ನಾಡಲಿದ್ದು ಇದಕ್ಕೂ ಮುನ್ನ ಪಾಕಿಗರು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರನ್ನು ನಡೆಸಿಕೊಂಡಂತ ರೀತಿ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. 
ಬಾಲಾಕೋಟ್ ವಾಯುದಾಳಿ ನಂತರ ವಿಂಗ್ ಕಮಾಂಡರ್ ಅಭಿನಂದನ್ ರನ್ನು ಪಾಕ್ ಸೇನೆ ಬಂಧಿಸಿತ್ತು. ಈ ವೇಳೆ ಅಭಿನಂದನ್ ರನ್ನು ತೀವ್ರ ವಿಚಾರಣೆಗೆ ಪಾಕಿಸ್ತಾನ ಒಳಪಡಿಸಿತ್ತು. ಅಲ್ಲದೆ ಅಭಿನಂದನ್ ಟೀ ಕುಡಿಯುತ್ತ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಇದೀಗ ಇದೇ ರೀತಿಯಲ್ಲಿ ಟೀಂ ಇಂಡಿಯಾ ಜೆರ್ಸಿ ತೊಟ್ಟಿರುವ ವ್ಯಕ್ತಿಯೋರ್ವನನ್ನು ವಿಚಾರಣೆ ನಡೆಸಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಇನ್ನು ಪಾಕಿಸ್ತಾನದವರು ಅಭಿನಂದನ್ ಮಾದರಿಯಲ್ಲಿ ಕೊಹ್ಲಿಯನ್ನು ಸಂದರ್ಶನ ಮಾಡುತ್ತಿದ್ದಾರೆ ಎಂಬಂತೆ ತೋರಿಸಲು ಈ ವಿಡಿಯೋ ಮಾಡಲಾಗಿದೆ. ವಿಡಿಯೋದಲ್ಲಿ ಪಾಕಿಗರು ನೀವು ಟಾಸ್ ಗೆದ್ದರೆ ಏನು ಮಾಡುತ್ತೀರಿ? 11 ಜನರ ತಂಡದಲ್ಲಿ ಯಾರೆಲ್ಲ ಇರುತ್ತಾರೆ ಎನ್ನುವ ಪ್ರಶ್ನೆಗಳನ್ನು ಕೇಳಲಾಗಿದೆ. ಈ ವೇಳೆ ಅಭಿನಂದನ್ ರೀತಿ ಕಾಣುವ ವ್ಯಕ್ತಿ ನಾನು ಅದನ್ನು ಹೇಳಲು ಸಾಧ್ಯವಿಲ್ಲ ಎಂದು ಉತ್ತರ ನೀಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com