ಬಾಂಗ್ಲಾ-ಶ್ರೀಲಂಕಾ ಪಂದ್ಯಕ್ಕೂ ಮಳೆ ಅಡ್ಡಿ: ಎರಡೂ ತಂಡಗಳಿಗೂ ತಲಾ 1 ಅಂಕ!

ಮಳೆಯಿಂದಾಗಿ ವಿಶ್ವಕಪ್ ಟೂರ್ನಿಯ ಹಲವು ಪಂದ್ಯಗಳು ರದ್ದಾಗುತ್ತಿದ್ದು ಟೂರ್ನಿ ಕುತೂಹಲ ಕಳೆದುಕೊಳ್ಳುತ್ತಿದೆ. ಹೌದು ಇಂದು ನಡೆಯಬೇಕಿದ್ದ ಬಾಂಗ್ಲಾ ಹಾಗೂ ಶ್ರೀಲಂಕಾ...

Published: 11th June 2019 12:00 PM  |   Last Updated: 12th June 2019 12:47 PM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಲಂಡನ್: ಮಳೆಯಿಂದಾಗಿ ವಿಶ್ವಕಪ್ ಟೂರ್ನಿಯ ಹಲವು ಪಂದ್ಯಗಳು ರದ್ದಾಗುತ್ತಿದ್ದು ಟೂರ್ನಿ ಕುತೂಹಲ ಕಳೆದುಕೊಳ್ಳುತ್ತಿದೆ. ಹೌದು ಇಂದು ನಡೆಯಬೇಕಿದ್ದ ಬಾಂಗ್ಲಾ ಹಾಗೂ ಶ್ರೀಲಂಕಾ ನಡುವಣ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗಿದೆ.

ಬ್ರಿಸ್ಟೋಲ್ ನ ಕೌಂಟಿ ಮೈದಾನದಲ್ಲಿ ಪಂದ್ಯ ನಡೆಯಬೇಕಿತ್ತು. ಆದರೆ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಪಂದ್ಯವನ್ನು ರದ್ದು ಮಾಡಲಾಗಿದೆ. ಇನ್ನು ನಿನ್ನೆ ಸಹ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಕ್ಕೂ ಮಳೆ ಅಡ್ಡಿಯಾಗಿತ್ತು. 

ಶ್ರೀಲಂಕಾ 4 ಪಂದ್ಯಗಳ ಪೈಕಿ 4 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದರೆ 4 ಪಂದ್ಯಗಳಿಂದ 3 ಅಂಕಗಳ ಗಳಿಸಿ ಬಾಂಗ್ಲಾದೇಶ 7ನೇ ಸ್ಥಾನದಲ್ಲಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp