ವಿಶ್ವಕಪ್ ಟೂರ್ನಿ ನಡುವೆ ಬ್ರೇಕ್ ತೆಗೆದುಕೊಂಡು ಭಾರತ್ ಸಿನಿಮಾ ವೀಕ್ಷಿಸಿದ ಟೀಂ ಇಂಡಿಯಾ
ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಸತತ 2 ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡಿರುವ ಟೀಂ ಇಂಡಿಯಾ ಆಟಗಾರರು ಇದೀಗ ಕ್ರಿಕೆಟ್ ನಿಂದ ಕೊಂಚ ಬ್ರೇಕ್ ಪಡೆದು ನಾಟಿಂಗ್ ಹ್ಯಾಮ್ ನಲ್ಲಿ ನಟ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
Published: 12th June 2019 12:00 PM | Last Updated: 12th June 2019 01:35 AM | A+A A-

ಭಾರತ್ ಚಿತ್ರ ವೀಕ್ಷಿಸಿದ ಟೀಂ ಇಂಡಿಯಾ ಆಟಗಾರರು
Source : Online Desk
ನಾಟಿಂಗ್ ಹ್ಯಾಮ್: ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಸತತ 2 ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡಿರುವ ಟೀಂ ಇಂಡಿಯಾ ಆಟಗಾರರು ಇದೀಗ ಕ್ರಿಕೆಟ್ ನಿಂದ ಕೊಂಚ ಬ್ರೇಕ್ ಪಡೆದು ನಾಟಿಂಗ್ ಹ್ಯಾಮ್ ನಲ್ಲಿ ನಟ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ವಿಶ್ವಕಪ್ 2019 ಟೂರ್ನಿಯ ನಿರಂತರ ಪಂದ್ಯಗಳ ನಡುವೆಯೂ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ, ಗಾಯಾಳು ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಕೇದಾರ್ ಜಾದವ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಸಿನಿಮಾ ವೀಕ್ಷಣೆ ಬಳಿಕ ಕೇದಾರ್ ಜಾಧವ್ ಟ್ವಿಟರ್ ನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದು, 'ಭಾರತ್ ಕಿ ಟೀಮ್, ಭಾರತ್ ಮೂವಿ ಕೆ ಬಾದ್"(ಭಾರತ ತಂಡ, 'ಭಾರತ್' ಸಿನಿಮಾ ನಂತರ) ಎಂದು ಶೀರ್ಷಿಕೆ ನೀಡಿದ್ದಾರೆ. ಇನ್ನು ಈ ಫೋಟೋಗೆ ಸಲ್ಮಾನ್ ಖಾನ್ ಲೈಕ್ ಮಾಡಿದ್ದು, ಭಾರತ್ ಸಿನಿಮಾ ವೀಕ್ಷಿಸಿದ್ದಕ್ಕೆ ಟೀಮ್ ಇಂಡಿಯಾಗೆ ಧನ್ಯವಾದ ಎಂದು ಹೇಳಿದ್ದಾರೆ.
ವಿಶ್ವಕಪ್ 2019ರ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ್ದ ಭಾರತ ತಂಡ ಎರಡನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧವೂ ಜಯ ಸಾಧಿಸಿತ್ತು. ಇನ್ನು ಮೂರನೇ ಪಂದ್ಯವನ್ನು ನಾಳೆ ನಾಟಿಂಗ್ಹ್ಯಾಂನಲ್ಲಿ ನ್ಯೂಜಿಲ್ಯೆಂಡ್ ವಿರುದ್ಧ ಆಡಲಿದೆ. ಪ್ರಸ್ತುತ ಟೂರ್ನಿಯಲ್ಲಿ 3 ಪಂದ್ಯಗಳನ್ನಾಡಿರುವ ಮೂರು ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಿಯಾಗಿದೆ.
ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ಅಭಿನಯದ ಈ ಸಿನಿಮಾ ಕಳೆದ ವಾರ ರಂಜಾನ್ ಹಬ್ಬದಂದು ಬಿಡುಗಡೆಯಾಗಿತ್ತು.
Stay up to date on all the latest ಕ್ರಿಕೆಟ್ news