ಭಾರತ ವರ್ಸಸ್ ನ್ಯೂಜಿಲೆಂಡ್: ಕೊಹ್ಲಿ 57 ರನ್ ಗಳಿಸಿದರೆ ಸಚಿನ್ ರ ಮತ್ತೊಂದು ದಾಖಲೆ ಧೂಳಿಪಟ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆ ಹಿಂದಿಕ್ಕಲು ತುದಿಗಾಲಲ್ಲಿ ನಿಂತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆ ಹಿಂದಿಕ್ಕಲು ತುದಿಗಾಲಲ್ಲಿ ನಿಂತಿದ್ದಾರೆ.
ಇಂದು ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಐಸಿಸಿ ವಿಶ್ವಕಪ್‌ ಟೂರ್ನಿಯ 18ನೇ ಪಂದ್ಯದಲ್ಲಿ ಇಲ್ಲಿನ ಟ್ರೆಂಟ್‌ ಬ್ರಿಡ್ಜ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ವಿಶ್ವ ದಾಖಲೆ ನಿರ್ಮಿಸುವ ಅವಕಾಶವಿದೆ. ಇಂದು ನಡೆಯುವ ನ್ಯೂಜಿಲೆಂಡ್ ವಿರುದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 57 ರನ್ ಗಳಿಸಿದರೆ ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆಯೊಂದನ್ನು ಹಿಂದಿಕ್ಕಲ್ಲಿದ್ದು, ಈ 57 ರನ್ ಗಳ ಮುಖಾಂತರ ಕೊಹ್ಲಿ ಏಕದಿನ ವೃತ್ತಿ ಜೀವನದಲ್ಲಿ  11,000 ರನ್ ಪೂರೈಸಲಿದ್ದಾರೆ. 
ಕಳೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಕೊಹ್ಲಿ 77 ಎಸೆತಗಳಿಗೆ 82 ರನ್ ಬಾರಿಸಿದ್ದರು. ಇದೀಗ ಇವತ್ತಿನ ಕಿವಿಸ್‌ ವಿರುದ್ಧದ ಪಂದ್ಯದಲ್ಲಿ ಕೇವಲ 57 ರನ್ ಬಾರಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ ವೇಗದ 11,000 ರನ್ ಪೂರೈಸಿದ ದಾಖಲೆಗೆ ವಿರಾಟ್‌ ಕೊಹ್ಲಿ ಭಾಜನರಾಗಲಿದ್ದಾರೆ. ಏಕದಿನದಲ್ಲಿ 221 ಇನ್ನಿಂಗ್ಸ್ ಆಡಿರುವ ಕೊಹ್ಲಿ ನ್ಯೂಜಿಲೆಂಡ್ ವಿರುದ್ದದ ಪಂದ್ಯ 222ನೇ ಇನ್ನಿಂಗ್ಸ್ ಆಗಿರಲಿದೆ. ಆ ಮೂಲಕ ಕೊಹ್ಲಿ 11 ಸಾವಿರ ರನ್ ಪೂರೈಸಿದ ಭಾರತ ಮೂರನೇ ಆಟಗಾರ ಎಂಬ ಕ್ರೀರ್ತಿಗೆ ಭಾಜನರಾಗಲಿದ್ದಾರೆ. ಈ ಸಾಧನೆಗಾಗಿ ಸಚಿನ್ ತೆಂಡೂಲ್ಕರ್ 276 ಇನ್ನಿಂಗ್ಸ್ ತೆಗೆದುಕೊಂಡಿದ್ದರು. 
ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್ (18,426 ರನ್ ಗಳು) ಮತ್ತು ಸೌರವ್ ಗಂಗೂಲಿ (11,363 ರನ್ ) ಈ ಕೀರ್ತಿಗೆ ಭಾಜನರಾಗಿದ್ದರು. 
ಆದರೆ, ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಅನುಪಸ್ಥಿಯಲ್ಲಿ ಭಾರತ ಕೊಂಚ ಒತ್ತಡದಲ್ಲಿದೆ. ಆದ್ದರಿಂದ ಕೊಹ್ಲಿ ಮೇಲೆ ಇನ್ನಷ್ಟು ಒತ್ತಡ ಬಿದ್ದಿದೆ. ಕೆ.ಎಲ್‌ ರಾಹುಲ್‌ ಅವರು ರೋಹಿತ್‌ ಶರ್ಮಾ ಜತೆ ಇನಿಂಗ್ಸ್‌ ಆರಂಭಿಸಲಿದ್ದಾರೆ. ಕೊಹ್ಲಿ ಮೇಲೆ ಈ ಪಂದ್ಯದಲ್ಲಿ ಸಾಕಷ್ಟು ನಿರೀಕ್ಷೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com