ಭಾರತ-ಪಾಕಿಸ್ತಾನ ವಿಶ್ವಕಪ್ ಟಿಕೆಟ್ ಬೆಲೆ ಎಷ್ಟು ಗೊತ್ತಾ?

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯ ಯಾರನ್ನು ತಾನೆ ಆಕರ್ಷಿಸುವುದಿಲ್ಲ ಹೇಳಿ.

Published: 14th June 2019 12:00 PM  |   Last Updated: 15th June 2019 12:38 PM   |  A+A-


India-Pakistan WC tickets being re-sold for Rs 60K

ಭಾರತ-ಪಾಕಿಸ್ತಾನ ವಿಶ್ವಕಪ್ ಟಿಕೆಟ್ ಬೆಲೆ ಎಷ್ಟು ಗೊತ್ತಾ?

Posted By : SBV SBV
Source : IANS
ಲಂಡನ್: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯ ಯಾರನ್ನು ತಾನೆ ಆಕರ್ಷಿಸುವುದಿಲ್ಲ ಹೇಳಿ. ಪ್ರತಿ ಬಾರಿಯೂ ರೋಚಕವಾಗಿರಲಿರುವ ಭಾರತ-ಪಾಕ್ ಪಂದ್ಯ ಈ ಬಾರಿ ವಿಶ್ವಕಪ್ ನಲ್ಲಿಯೂ ಕುತೂಹಲ ಮೂಡಿಸಿದೆ. 

ಜೂ.16 ರಂದು ವಿಶ್ವಕಪ್ ಸರಣಿಯಲ್ಲಿ ಭಾರತ-ಪಾಕ್ ನಡುವೆ ಪಂದ್ಯ ನಿಗದಿಯಾಗಿದ್ದು, ಟಿಕೆಟ್ ನ ಪ್ರಾರಂಭಿಕ ಬೆಲೆ  ರೂ.20,000 ಕ್ಕೆ ನಿಗದಿಯಾಗಿದೆ. ಗರಿಷ್ಠ ಮೊತ್ತ 60,000 ರೂಪಾಯಿಗಳಿಗೆ ಏರಿಕೆಯಾಗಿದೆ. 

ಮಾಂಚೈಸ್ಟರ್ ನ ಕ್ರೀಡಾಂಗಣದಲ್ಲಿ 20000 ಆಸನಗಳ ವ್ಯವಸ್ಥೆಯಿದ್ದು, ಪ್ರತಿ ಟಿಕೆಟ್ ನ ಗರಿಷ್ಠ ಮೊತ್ತ 62, 610 ರೂಪಾಯಿಗಳಿಗೆ ಏರಿಕೆಯಾಗಿದೆ. 

ವೈಯಾಗೋಗೋ ವೆಬ್ ಸೈಟ್ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿದ್ದು, ಈಗಾಗಲೇ ಟಿಕೆಟ್ ಖರೀದಿಸಿರುವ 480 ಮಂದಿ ಟಿಕೆಟ್ ನ್ನು ಮರುಮಾರಾಟ ಮಾಡಲು ಮುಂದಾಗುತ್ತಿದ್ದು, ವೈಯಾಗೋಗೋ ವೆಬ್ ಸೈಟ್ ಮರುಮಾರಾಟಕ್ಕೆ ಅವಕಾಶ ಕಲ್ಪಿಸಿದೆ. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp