2011ರಿಂದಲೂ ಧೋನಿಯಿಂದ ಕ್ರಿಕೆಟ್ ಪಂದ್ಯದ ಟಿಕೆಟ್ ಪಡೆಯುವ ಪಾಕಿಸ್ತಾನದ ಅಭಿಮಾನಿ!

ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬರು 2011ರಿಂದಲೂ ಟೀಂ ಇಂಡಿಯಾ ಖ್ಯಾತ ಆಟಗಾರ ಧೋನಿಯಿಂದ ಟಿಕೆಟ್ ಪಡೆಯುತ್ತಾರೆ. ಇದು ಆಚ್ಚರಿಯಾದರೂ ಸತ್ಯ.
ಬಷೀರ್ ಚಾಚಾ, ಧೋನಿ
ಬಷೀರ್ ಚಾಚಾ, ಧೋನಿ
ನವದೆಹಲಿ: ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬರು 2011ರಿಂದಲೂ ಟೀಂ ಇಂಡಿಯಾ ಖ್ಯಾತ ಆಟಗಾರ ಧೋನಿಯಿಂದ ಟಿಕೆಟ್ ಪಡೆಯುತ್ತಾರೆ. ಇದು ಆಚ್ಚರಿಯಾದರೂ ಸತ್ಯ. 
ಪಾಕಿಸ್ತಾನ ಮೂಲದ ಮೊಹಮ್ಮದ್ ಬಷೀರ್ ಅಕಾ ಚಾಚಾ ಹಾಗೂ ಮಹೇಂದ್ರ ಸಿಂಗ್ ಧೋನಿ ನಡುವಿನ ಬಾಂಧವ್ಯ, 2011ರ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಣ ಸೆಮಿಫೈನಲ್ ಪಂದ್ಯದಿಂದಲೂ ಗಟ್ಟಿಯಾಗಿ ನೆಲೆಯೂರಿದೆ. 
ಭಾನುವಾರ ನಡೆಯಲಿರುವ ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕಾಗಿ ಬಷೀರ್ ಅಂದಾಜು 6 ಸಾವಿರ ಕಿಲೋ ಮೀಟರ್ ದೂರದಲ್ಲಿರುವ ಚಿಕಾಗೋದಿಂದ ಮ್ಯಾಂಚೆಸ್ಟರ್ ಗೆ ಬಂದಿದ್ದರೂ ಟಿಕೆಟ್ ಸಿಕ್ಕಿಲ್ಲ. ಈ ಸುದ್ದಿ  ತಿಳಿದ ನಂತರ ಧೋನಿ ಟಿಕೆಟ್ ದೊರಕಿಸಿಕೊಟ್ಟಿದ್ದಾರೆ. 
ಪಂದ್ಯ ವೀಕ್ಷಣೆಗಾಗಿ ನಿನ್ನೆ ಇಲ್ಲಿಗೆ ಬಂದೆ. ಜನರು ಟಿಕೆಟ್ ಗಾಗಿ 800ರಿಂದ 900 ರೂಪಾಯಿ ನೀಡಲು ಸಿದ್ಧರಿರುವುದನ್ನು ನೋಡಿದೆ. ಇದೇ ದುಡ್ಡಿನಲ್ಲಿ ಚಿಕಾಗೋಗೆ ಹೋಗಬಹುದಾಗಿತ್ತು  ಆದರೆ. ಧೋನಿ ಟಿಕೆಟ್ ದೊರಕಿಸಿದ್ದು, ಅವರಿಗೆ ಧನ್ಯವಾದ ಹೇಳುವುದಾಗಿ ಹೇಳಿದ ಬಷೀರ್, 
ಈಗ ಪಂದ್ಯ ವೀಕ್ಷಣೆಗಾಗಿ ಹೋರಾಟ ಪಡುವ ಅಗತ್ಯವಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.  62 ವರ್ಷದ ಬಷೀರ್  ಚಿಕಾಗೋದಲ್ಲಿ ಸ್ವಂತ ರೆಸ್ಟೋರೆಂಟ್ ಹೊಂದಿದ್ದಾರೆ.
2011ರಲ್ಲಿ ಮೊಹಾಲಿಯಲ್ಲಿ ನಡೆದ ಭಾರತ- ಪಾಕಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯದಲ್ಲೂ ಧೋನಿಯಿಂದಲೇ  ಟಿಕೆಟ್ ಪಡೆದಿದ್ದಾಗಿ ಹೇಳುವ ಬಷೀರ್ , ಆಗಿನಿಂದಲೂ ತಮ್ಮ ಹಾಗೂ ಧೋನಿ ನಡುವಣ ಬಾಂಧವ್ಯ ಮುಂದುವರೆದಿದೆ ಎನ್ನುತ್ತಾರೆ .
 ಧೋನಿ ತಮ್ಮ ಸಹೋದ್ಯೋಗಿಗಳಿಗೂ ಸುಲಭವಾಗಿ ಸಿಗುವುದಿಲ್ಲ. ಆದರೆ, ಬಷೀರ್ ಅವರಿಗೆ ಮಾತ್ರ ನಿರಾಸೆ ಮಾಡುವುದಿಲ್ಲ. ಅವರಿಗೆ ಕರೆ ಮಾಡದಿದ್ದರೂ ಕೇವಲ ಒಂದು ಸಂದೇಶ ನೋಡಿಯೇ ಟಿಕೆಟ್ ದೊರಕಿಸಿಕೊಡುತ್ತಾರೆ. ಅವರೊಬ್ಬ ಅತ್ಯುತ್ತಮ ಮಾನವತಾವಾದಿ ಎಂದು ಗುಣಗಾನ ಮಾಡಿದ್ದಾರೆ.
ಮ್ಯಾಂಚೆಸ್ಟಾರ್ ಗೆ ಬಂದ ನಂತರ ಪಾಕಿಸ್ತಾನಿ ಆಟಗಾರರು ಇರುವ ಹೋಟೆಲ್ ಗೆ ಹೋಗಿ ತಂಡದ ಆಟಗಾರರನ್ನು ಭೇಟಿ ಮಾಡಿದ್ದಾರೆ. ನಂತರ ಟೀಂ ಇಂಡಿಯಾ ಆಟಗಾರರಿರುವ ಹೋಟೆಲ್ ಗೆ ಭೇಟಿ ನೀಡಿದ್ದಾರೆ. ಪಂದ್ಯದ ವೇಳೆಯಲ್ಲಿ ಉಭಯ ದೇಶಗಳ ಸಮವಸ್ತ್ರ ಧರಿಸುವ ಬಷೀರ್ , ತಾವೂ ಶಾಂತಿಯ ರಾಯಬಾರಿ ಎಂದು ಕರೆದುಕೊಳ್ಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com