ಕಪ್ ವಿವಾದ: ಪಾಕಿಸ್ತಾನಿ ಮಾಧ್ಯಮಗಳಿಗೆ ತಲೆತಿರುಗುವಂತೆ ತಿರುಗೇಟು ಕೊಟ್ಟ ಪೂನಂ ಪಾಂಡೆ!

ಭಾರತೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಪಾಕಿಸ್ತಾನಿ ಮಾಧ್ಯಮಗಳ ಕಪ್ ಜಾಹಿರಾತಿಗೆ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಪಾಕಿಗಳ ತಲೆ ತಿರುಗುವಂತೆ ತಿರುಗೇಟು ನೀಡಿದ್ದಾರೆ.

Published: 14th June 2019 12:00 PM  |   Last Updated: 14th June 2019 03:40 AM   |  A+A-


WATCH: How bollywood Actress Poonam Pandey mocks Pakistan for World Cup jibe

ಪೂನಂ ಪಾಂಡೆ ತಿರುಗೇಟು

Posted By : SVN SVN
Source : Online Desk
ನವದೆಹಲಿ: ಭಾರತೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಪಾಕಿಸ್ತಾನಿ ಮಾಧ್ಯಮಗಳ ಕಪ್ ಜಾಹಿರಾತಿಗೆ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಪಾಕಿಗಳ ತಲೆ ತಿರುಗುವಂತೆ ತಿರುಗೇಟು ನೀಡಿದ್ದಾರೆ.

ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಪಾಕಿಸ್ತಾನಿ ಮಾಧ್ಯಮಗಳು ಬಿಡುಗಡೆ ಮಾಡಿದ್ದ ಕಪ್ ಜಾಹಿರಾತು ವ್ಯಾಪಕ ವೈರಲ್ ಆಗಿ, ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಬಾಲಾಕೋಟ್ ದಾಳಿಯ ಬಳಿಕ ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಅಟ್ಟಾಡಿಸಿಕೊಂಡು ಹೋಗಿ ಎಫ್ 16 ಯುದ್ದ ವಿಮಾನವನ್ನು ಹೊಡೆದುರುಳಿಸಿದ್ದ ಭಾರತದ ಹೆಮ್ಮೆಯ ಯೋಧ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರ ಘಟನೆ ಕುರಿತ ವಿವಾದಿತ ಜಾಹಿರಾತೊಂದನ್ನು ಪಾಕಿಸ್ತಾನಿ ಮೀಡಿಯಾಗಳು ಪ್ರಸಾರ ಮಾಡಿದ್ದವು. ಈ ಜಾಹಿರಾತಿಗೆ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. 

ಇದೀಗ ಇದೇ ಜಾಹಿರಾತಿಗೆ ವಿರುದ್ಧವಾಗಿ ವಿವಾದಿತ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ತಮ್ಮದೇ ಆದ 'ವಿಶಿಷ್ಟ' ರೀತಿಯಲ್ಲಿ ತಿರುಗೇಟು ನೀಡಿದ್ದಾರೆ. ಭಾರತದ ಹೆಮ್ಮೆಯ ವೀರ ಯೋಧನನ್ನು ಅಪಹಾಸ್ಯ ಮಾಡಿದ್ದೀರಿ ಇದು ಸರಿಯಲ್ಲ. ಕೇವಲ ಕಾಫಿ ಕಪ್ ಗೇ ಏಕೆ ಖುಷಿ ಪಡುತ್ತೀರಿ.. ಡಬಲ್ ಡೀ ಕಪ್ ತೆಗೆದು ಕೊಳ್ಳಿ... ನೀವು ಇದರಲ್ಲಿ ಟೀ ಕೂಡ ಕುಡಿಯಬಹುದು ಎಂದು ಕಾಫಿ ಕಪ್ ಬದಲಿಗೆ ತಮ್ಮ ಒಳ ಉಡುಪನ್ನು ಬಿಚ್ಚಿ ನೀಡುತ್ತಾರೆ. ಕಾಫಿ ಕಪ್ ಬದಲಿಗೆ ಡಿ ಕಪ್ ತೆಗೆದುಕೊಳ್ಳಿ, ಆದರೆ ವಿಶ್ವಕಪ್ ನಮಗೆೇ ಎಂದು ತಿರುಗೇಟು ನೀಡಿದ್ದಾರೆ.  ಪೂನಂ ಪಾಂಡೆಯ ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp