ಸಂಗಕ್ಕಾರ, ವಿವಿಯನ್ ರಿಚರ್ಡ್ಸ್ ದಾಖಲೆ ಧೂಳಿಪಟ ಮಾಡಿದ ಯುನಿವರ್ಸಲ್ ಬಾಸ್ ಗ್ಲೇಯ್!

ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.

Published: 15th June 2019 12:00 PM  |   Last Updated: 15th June 2019 11:52 AM   |  A+A-


Chris Gayle

ಕ್ರಿಸ್ ಗೇಯ್ಲ್

Posted By : VS VS
Source : Online Desk
ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಸೋತರು ಕ್ರಿಸ್ ಗೇಯ್ಲ್ ಮಹತ್ವದ ದಾಖಲೆಯೊಂದನ್ನು ಬರೆದಿದ್ದಾರೆ. 36 ರನ್ ಪೇರಿಸಿ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಎನಿಸಿಕೊಂಡರು.

ಕುಮಾರ ಸಂಗಕ್ಕಾರ ಇಂಗ್ಲೆಂಡ್ ವಿರುದ್ಧ 1625 ರನ್ ಪೇರಿಸಿ ಅಗ್ರಸ್ಥಾನದಲ್ಲಿದ್ದರು. ಇದೀಗ ಗೇಯ್ಲ್ 1632 ರನ್ ಬಾರಿಸಿ ಈ ದಾಖಲೆಯನ್ನು ಮುರಿದಿದ್ದಾರೆ. ಇನ್ನು 1619 ರನ್ ಪೇರಿಸಿ ವಿವಿಯನ್ ರಿಚರ್ಡ್ಸ್ ಮೂರನೇ ಸ್ಥಾನದಲ್ಲಿದ್ದಾರೆ.
Stay up to date on all the latest ಕ್ರಿಕೆಟ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp