ಪೆಟ್ಟು ತಿಂದ ಜೋ ರೂಟ್‍ರನ್ನು ವಿಚಿತ್ರ ರಿಯಾಕ್ಷನ್‌ನಿಂದ ನಗಿಸಿದ ಕ್ರಿಸ್ ಗೇಯ್ಲ್, ವಿಡಿಯೋ ವೈರಲ್!

ವಿಶ್ವಕಪ್ ಟೂರ್ನಿಯಲ್ಲಿ ಪೆಟ್ಟು ತಿಂದ ಇಂಗ್ಲೆಂಡ್ ತಂಡದ ಆಟಗಾರ ಜೋ ರೂಟ್‍ರನ್ನು ತಮ್ಮ ವಿಚಿತ್ರ ರಿಯಾಕ್ಷನ್ ಮೂಲಕ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ನಗಿಸಿರುವ...
ಕ್ರಿಸ್ ಗೇಯ್ಲ್-ಜೋ ರೂಟ್
ಕ್ರಿಸ್ ಗೇಯ್ಲ್-ಜೋ ರೂಟ್
ಸೌತಮ್ಟನ್: ವಿಶ್ವಕಪ್ ಟೂರ್ನಿಯಲ್ಲಿ ಪೆಟ್ಟು ತಿಂದ ಇಂಗ್ಲೆಂಡ್ ತಂಡದ ಆಟಗಾರ ಜೋ ರೂಟ್‍ರನ್ನು ತಮ್ಮ ವಿಚಿತ್ರ ರಿಯಾಕ್ಷನ್ ಮೂಲಕ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ನಗಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 8 ವಿಕೆಟ್ ಗಳಿಂ ಸೋಲು ಕಂಡಿದೆ. ಆದರೆ ಯುನಿವರ್ಸಲ್ ಬಾಸ್ ಎಂದೇ ಖ್ಯಾತರಾಗಿರುವ ಕ್ರಿಸ್ ಗೇಯ್ಲ್ ಮಾತ್ರ ಮೈದಾನದಲ್ಲಿ ತಮ್ಮ ವಿಚಿತ್ರ ಆ್ಯಕ್ಷನ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಚಿಸಿದರು. 
ಇಂಗ್ಲೆಂಡ್ ವಿರುದ್ಧ ಬೌಲಿಂಗ್ ಮಾಡಿದ್ದ ಕ್ರಿಸ್ ಗೇಯ್ಲ್ ವಾರ್ಮ್ ಅಪ್ ಮಾಡುವಾಗ ಡ್ಯಾನ್ಸ್ ಮಾಡಿ ರಂಜಿಸಿದರು. ಇನ್ನು ತಮ್ಮ ಓವರ್ ನಲ್ಲಿ ಚೆಂಡು ಜೋ ರೂಟ್  ಹೊಟ್ಟೆಗೆ ತಾಕಿತ್ತು. ಈ ವೇಳೆ ಕ್ರಿಸ್ ಗೇಯ್ಲ್ ಕೊಟ್ಟ ಸ್ಪಂದನೆಗೆ ಸ್ವತಃ ರೂಟ್ ಮೊಗದಲ್ಲಿ ನಗು ಬರುವಂತೆ ಮಾಡಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com