ಟೀಂ ಇಂಡಿಯಾದಲ್ಲಿ ಈ ಇಬ್ಬರು ಕಪಿಲ್ ದೇವ್ ಫೇವರಿಟ್ ಆಟಗಾರರು: ಧೋನಿ, ಕೊಹ್ಲಿ ಅಲ್ಲ!

ಭಾರತೀಯ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಆಲ್ ರೌಂಡರ್ ಹಾಗೂ ಭಾರತಕ್ಕೆ ಮೊದಲ ಬಾರಿಗೆ ವಿಶ್ವಕಪ್ ಗೆದ್ದಕೊಟ್ಟ ಮಾಜಿ ನಾಯಕ ಕಪಿಲ್ ದೇವ್ , ವೈಯಕ್ತಿಕವಾಗಿ ಇಷ್ಟಪಡುವ ಇಬ್ಬರು ಟೀಂ ಇಂಡಿಯಾ ಆಟಗಾರರ ಹೆಸರನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.

Published: 16th June 2019 12:00 PM  |   Last Updated: 16th June 2019 02:09 AM   |  A+A-


Kapil dev

ಕಪಿಲ್ ದೇವ್

Posted By : ABN ABN
Source : The New Indian Express
ಚೆನ್ನೈ: ಭಾರತೀಯ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಆಲ್ ರೌಂಡರ್ ಹಾಗೂ ಭಾರತಕ್ಕೆ ಮೊದಲ ಬಾರಿಗೆ ವಿಶ್ವಕಪ್ ಗೆದ್ದಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ,  ವೈಯಕ್ತಿಕವಾಗಿ ಇಷ್ಟಪಡುವ ಇಬ್ಬರು ಟೀಂ ಇಂಡಿಯಾ ಆಟಗಾರರ ಹೆಸರನ್ನು ಮೊದಲ ಬಾರಿಗೆ  ಬಹಿರಂಗಪಡಿಸಿದ್ದಾರೆ. 

ಇವರಲ್ಲಿ  ನಾಯಕ ವಿರಾಟ್ ಕೊಹ್ಲಿ ಅಥವಾ ಎಂಎಸ್ ಧೋನಿ ಆಗದಿರುವುದು ಆಶ್ಚರ್ಯಕರ ಸಂಗತಿ ಆಗಿದೆ. ಹಾಗಾದರೆ ಇನ್ಯಾರು ಎಂದರೆ ವೇಗಿ ಜಸ್ಪ್ರೀತ್ ಬೂಮ್ರಾ ಹಾಗೂ ಆರಂಭಿಕ ಆಟಗಾರ ಕನ್ನಡಿಗ ಕೆ.ಎಲ್. ರಾಹುಲ್ .

ಜಸ್ಪ್ರೀತ್ ಬೂಮ್ರಾ ಹಾಗೂ ಕೆ. ಎಲ್. ರಾಹುಲ್ ಅತ್ಯುನ್ನತವಾಗಿ ಸಾಧಿಸುತ್ತಾರೆ ಎಂಬ ಭರವಸೆಯೊಂದಿಗೆ ಕಾಯುತ್ತಿರುವುದಾಗಿ  ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

ಟೀಂ ಇಂಡಿಯಾ ವೇಗಿಗಳ ಕೊರತೆ ಎದುರಿಸುತ್ತಿದ್ದ ಸಂದರ್ಭದಲ್ಲಿ ವಿಶ್ವದ ಅತ್ಯುತ್ತಮ ಬೌಲರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಬೂಮ್ರಾ ಅವರನ್ನು ಕಪಿಲ್ ದೇವ್ ಹೊಗಳಿದ್ದಾರೆ. 

ಮೊದಲ ಬಾರಿಗೆ ಬೂಮ್ರಾ ಅವರನ್ನು ನೋಡಿದ್ದಾಗ ಅವರಿಗೆ ಅಂತಹ ಸಾಮರ್ಥ್ಯ ಇದೆ ಅನ್ನಿಸಿರಲಿಲ್ಲ.ಶಾರ್ಟ್ ರನ್ ಅಪ್ ನಲ್ಲಿ ವೇಗವಾಗಿ ಬೌಲಿಂಗ್ ಮಾಡುವುದು ಅಷ್ಟು ಸುಲಭವಲ್ಲ, ಮುಂದಿನ ಐದು ವರ್ಷಗಳ ಕಾಲ ಇದೇ ಸಾಮರ್ಥ್ಯವನ್ನು ಅವರಲ್ಲಿ ನೋಡಬಯಸುತ್ತೇನೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಕನ್ನಡಿಗ ಕೆ ಎಲ್ ರಾಹುಲ್ ಕೂಡಾ ಪ್ರತಿಭಾವಂತ ಆಟಗಾರರಾಗಿದ್ದಾರೆ. ರಾಹುಲ್ ತನ್ನ ಪ್ರತಿಭೆಗೆ ತಕ್ಕಂತೆ ಆಟ ಆಡುವ  ಭರವಸೆ ಹೊಂದಿರುವುದಾಗಿ ಹೇಳಿರುವ ಕಪೀಲ್ ದೇವ್,  ವಿಶ್ವಕಪ್ ಗೆದ್ದು ಸ್ವದೇಶಕ್ಕೆ ಕೊಹ್ಲಿ ಪಡೆ ಮರಳುತ್ತಾರೆ ಎಂಬ ವಿಶ್ವಾಸ ಇಟ್ಟುಕೊಂಡಿರುವುದಾಗಿ ಕಪಿಲ್ ದೇವ್ ಹೇಳಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp