ಭಾರತ-ಪಾಕ್ ಹೈ-ವೋಲ್ಟೇಜ್ ಪಂದ್ಯ ಬೆಟ್ಟಿಂಗ್ ನಲ್ಲೂ ದಾಖಲೆ!

ಭಾರತ-ಪಾಕ್ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯುತ್ತಿದ್ದು, ಬದ್ಧ ವೈರಿಗಳ ನಡುವಿನ ಕ್ರಿಕೆಟ್ ಸಮರವನ್ನು ಎದುರು ನೋಡಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ.

Published: 16th June 2019 12:00 PM  |   Last Updated: 16th June 2019 11:45 AM   |  A+A-


Satta Bazaar bids cross Rs 100 cr on India-Pak tie

ಭಾರತ-ಪಾಕ್ ಹೈ-ವೋಲ್ಟೇಜ್ ಪಂದ್ಯ ಬೆಟ್ಟಿಂಗ್ ನಲ್ಲೂ ದಾಖಲೆ!

Posted By : SBV SBV
Source : Online Desk
ಭಾರತ-ಪಾಕ್ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯುತ್ತಿದ್ದು, ಬದ್ಧ ವೈರಿಗಳ ನಡುವಿನ ಕ್ರಿಕೆಟ್ ಸಮರವನ್ನು ಎದುರು ನೋಡಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. 

ಇಂತಹ ಹೈ-ವೋಲ್ಟೇಜ್ ಪಂದ್ಯಗಳ ವೇಳೆ ಬೆಟ್ಟೀಂಗ್ ಸಹ ಗರಿಗೆದರಿದ್ದು, ಬರೊಬ್ಬರಿ 100 ಕೋಟಿ ರೂಪಾಯಿಗಳ ವರೆಗೆ ಬೆಟ್ಟಿಂಗ್ ಬಿಡ್ ನಡೆದಿದೆ. 

ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ ಸಿಆರ್) ನ ಸಟ್ಟಾ ಬಜಾರ್ ನಲ್ಲಿ ಭಾರತ-ಪಾಕ್ ನಡುವಿನ ಪಂದ್ಯಕ್ಕೆ ಬರೊಬ್ಬರಿ 100 ಕೋಟಿ ರೂಪಾಯಿ ಬೆಟ್ಟಿಂಗ್ ಬಿಡ್ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಭೂಗತ ಲೋಕದೊಂದಿಗೆ ನಂಟು ಹೊಂದಿರುವ ವ್ಯಾಪಾರಿ ವರ್ಗದವರು ಹಾಗೂ ಬುಕ್ಕಿಗಳು ಬೆಟ್ಟಿಂಗ್ ನಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಭಾರತ-ಪಾಕ್ ನಡುವಿನ ಪಂದ್ಯದ ಹಿನ್ನೆಲೆಯಲ್ಲಿ ಸಟ್ಟಾ ಬಜಾರ್ ನ ಕಾರ್ಯಾಚರಣೆಗಳ ಮೇಲೆ ನಿಗಾ ಇಟ್ಟಿದ್ದೇವೆ ಎಂದು ದೆಹಲಿಯ ಉಪ ಆಯುಕ್ತ ಮಧುರ್ ವರ್ಮ ಮಾಹಿತಿ ನೀಡಿದ್ದಾರೆ. ಈ ಹಿಂದೆ ಅತ್ಯಾಧುನಿಕ ಸಾಫ್ಟ್ ವೇರ್ ಬಳಕೆ ಮಾಡಿ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿಗಳನ್ನು ಉತ್ತರ ದೆಹಲಿಯಲ್ಲಿ ಬಂಧಿಸಲಾಗಿತ್ತು. 

Stay up to date on all the latest ಕ್ರಿಕೆಟ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp