ವಿಶ್ವಕಪ್ ಕ್ರಿಕೆಟ್ : ಬದ್ಧ ವೈರಿಗಳ ಕಾದಾಟ ವೀಕ್ಷಿಸಲು ಯೂನಿವರ್ಸ್ ಬಾಸ್ ಸಜ್ಜು!

ಬದ್ಧ ವೈರಿಗಳಾದ ಭಾರತ- ಪಾಕಿಸ್ತಾನ ನಡುವಣ ವಿಶ್ವಕಪ್ ಕ್ರಿಕೆಟ್ ಟೂರ್ನಿ ವೀಕ್ಷಿಸಲು ಯೂನಿವರ್ಸ್​ ಬಾಸ್​ ಕ್ರಿಸ್​ ಗೇಲ್​ ಕೂಡ ಸಜ್ಜುಗೊಂಡಿದ್ದು, ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರೀಯ ಧ್ವಜದ ಬಣ್ಣ ಹೊಂದಿರುವ ವಿಶೇಷ ಉಡುಪು​ ಧರಿಸಿ ಮಿಂಚುತ್ತಿದ್ದಾರೆ.
ಕ್ರಿಸ್​ ಗೇಲ್
ಕ್ರಿಸ್​ ಗೇಲ್
ಮ್ಯಾಂಚೆಸ್ಟರ್ : ಕಳೆದ ಕೆಲವು ದಿನಗಳಿಂದ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಅಡ್ಡಿಯನ್ನುಂಟುಮಾಡಿದ್ದ ವರುಣ ದೇವ ಬಿಡುವು ಮಾಡಿಕೊಂಡಿದ್ದು, ಬದ್ಧ ವೈರಿಗಳಾದ ಭಾರತ- ಪಾಕಿಸ್ತಾನ ನಡುವಣ ಕಾದಾಟ ವೀಕ್ಷಣೆಗೆ ನೆರವು ನೀಡಿರುವುದರಿಂದ ಇಡೀ ವಿಶ್ವವೇ ಪಂದ್ಯವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತ ಕುಳಿತಿದೆ.
ಸ್ಥಳೀಯ ಕಾಲಮಾನ ಮೂರು ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಭಾರತ - ಪಾಕಿಸ್ತಾನದ ಸಹಸ್ರಾರು ಕ್ರಿಕೆಟ್ ಅಭಿಮಾನಿಗಳು ಮೈದಾನದೊಳಗೆ ಲಗ್ಗೆ ಹಾಕಿದ್ದಾರೆ. ತಮ್ಮ ರಾಷ್ಟ್ರದ ಧ್ವಜ ಹಾಗೂ ಬಾವುಟಗಳನ್ನು ಪ್ರದರ್ಶಿಸುವ ಮೂಲಕ ಜಯ ಘೋಷಗಳನ್ನು ಮೊಳಗಿಸುತ್ತಿದ್ದಾರೆ. 
ಈ ಮಧ್ಯೆ ಪಂದ್ಯ ವೀಕ್ಷಣೆಗೆ ಯೂನಿವರ್ಸ್​ ಬಾಸ್​ ಕ್ರಿಸ್​ ಗೇಲ್​ ಕೂಡ ಸಜ್ಜುಗೊಂಡಿದ್ದು, ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರೀಯ ಧ್ವಜದ ಬಣ್ಣ ಹೊಂದಿರುವ ವಿಶೇಷ ಉಡುಪು​ ಧರಿಸಿ ಮಿಂಚುತ್ತಿದ್ದಾರೆ. 
ವೆಸ್ಟ್​ ಇಂಡೀಸ್​ನ ದೈತ್ಯ ಬ್ಯಾಟ್ಸ್​​ಮನ್​ ಗೇಲ್, ಬಲಗಡೆ ಭಾರತ ಹಾಗೂ ಎಡಗಡೆ ಪಾಕಿಸ್ತಾನದ ರಾಷ್ಟ್ರೀಯ ಧ್ವಜದ ಬಣ್ಣ ಹೊಂದಿರುವ ಉಡುಪು ಧರಿಸಿದ್ದು, ​ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ತಾವೂ ಶಾಂತಿಯ ಪ್ರತೀಕವಾಗಿ ಈ ಉಡುಪು ಧರಿಸಿದ್ದು, ಪಂದ್ಯ  ವೀಕ್ಷಣೆ ಮಾಡಲು ಕಾತರರಾಗಿರುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com