ಪಾಕ್ ವಿರುದ್ಧ ಐತಿಹಾಸಿಕ ಗೆಲುವಿನ ಹೊಸ್ತಿಲಲಿ ಭಾರತ, ಸಂಭ್ರಮಾಚರಣೆಗೆ ಮಳೆ ಅಡ್ಡಿ

ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯದಲ್ಲಿ ಬಾರತ ಗೆಲುವಿನ ಸನಿಹಕ್ಕೆ ಬಂದಿದ್ದರೂ ಸಹ ಸಂಭ್ರಮಾಚರಣೆಗೆ ಮಳೆ ಅಡ್ಡಿಯಾಗಿದೆ.
ಪಾಕ್ ವಿರುದ್ಧ ಐತಿಹಾಸಿಕ ಗೆಲುವಿನ ಹೊಸ್ತಿಲಲಿ ಭಾರತ, ಸಂಭ್ರಮಾಚರಣೆಗೆ ಮಳೆ ಅಡ್ಡಿ
ಪಾಕ್ ವಿರುದ್ಧ ಐತಿಹಾಸಿಕ ಗೆಲುವಿನ ಹೊಸ್ತಿಲಲಿ ಭಾರತ, ಸಂಭ್ರಮಾಚರಣೆಗೆ ಮಳೆ ಅಡ್ಡಿ
ಮ್ಯಾಂಚೆಸ್ಟರ್: ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯದಲ್ಲಿ ಬಾರತ ಗೆಲುವಿನ ಸನಿಹಕ್ಕೆ ಬಂದಿದ್ದರೂ ಸಹ ಸಂಭ್ರಮಾಚರಣೆಗೆ ಮಳೆ ಅಡ್ಡಿಯಾಗಿದೆ.
ಟೀಂ ಇಂಡಿಯಾ ಒಡ್ಡಿದ್ದ 337 ರನ್ ಗುರಿ ಬೆನ್ನತ್ತಿದ ಪಾಕ್ 35 ಓವರ್ ಗೆ 6 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದ್ದಾಗ ಮಳೆ ಪ್ರಾರಂಭವಾಗಿದ್ದು ಪಂದ್ಯ ಸ್ಥಗಿತವಾಗಿದೆ.
ಪಾಕ್ ತಂಡದಲ್ಲಿ ಕ್ರೀಸಿಗಿಳಿದಿದ್ದ ಇಮಾಮ್ ಉಲ್ ಹಕ್ 7 ಮತ್ತು ಫಖಾರ್ ಖಾನ್ 62 ಬಾಬರ್ 48 ಮೊಹಮ್ಮದ್ ಹಫೀಜ್ (9) ಹಾಗೂ ಶೋಯಿಬ್ ಮಲಿಕ್ (0) ಸರ್ಫರಾಜ್ ಅಹ್ಮದ್‌ 12 ರನ್ ಗಳಿಸಿದ್ದರು.
ಟೀಂ ಇಂಡಿಯಾ ಪರವಾಗಿ ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ಉತ್ತಮ ಬೌಲಿಂಗ್ ಪ್ರದರ್ಶನ ನಿಡಿದ್ದಾರೆ. ಆದರೆ ಪಂದ್ಯದ ನಡುವೆ ಗಾಯಗೊಂಡ ಭುವನೇಶ್ವರ್ ಮೈದಾನ ತೊರೆದರು. 
ಭಾರತದ ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ ಹಾಗೂ ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದ್ದಾರೆ. 
ಸಧ್ಯ ಡಕ್ವರ್ತ್​ ನಿಯಮದ ಅನ್ವಯ ಪಾಕ್​ಗೆ ಗೆಲ್ಲಲು 30 ಎಸೆತಗಳಲ್ಲಿ 136 ರನ್​ಗಳ ಟಾರ್ಗೆಟ್ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com