ಐಸಿಸಿ ವಿಶ್ವಕಪ್: ರೋಹಿತ್, ಕೊಹ್ಲಿ ಅಬ್ಬರದ ಬ್ಯಾಟಿಂಗ್, ಪಾಕ್ ಗೆಲುವಿಗೆ 337 ರನ್ ಗುರಿ

ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ಪಂದ್ಯ ಮಳೆ ಅಡ್ಡಿಯ ಹೊರತಾಗಿಯೂ ಮುಂದುವರಿದಿದ್ದು ಬಾರತ ನಿಗದಿತ ಐವತ್ತು ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 336 ರನ್ ಕಲೆ ಹಾಕಿದೆ.
ಐಸಿಸಿ ವಿಶ್ವಕಪ್: ರೋಹಿತ್, ಕೊಹ್ಲಿ ಅಬ್ಬರದ ಬ್ಯಾಟಿಂಗ್, ಪಾಕ್ ಗೆಲುವಿಗೆ 337 ರನ್ ಗುರಿ
ಐಸಿಸಿ ವಿಶ್ವಕಪ್: ರೋಹಿತ್, ಕೊಹ್ಲಿ ಅಬ್ಬರದ ಬ್ಯಾಟಿಂಗ್, ಪಾಕ್ ಗೆಲುವಿಗೆ 337 ರನ್ ಗುರಿ
ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ಪಂದ್ಯ ಮಳೆ ಅಡ್ಡಿಯ ಹೊರತಾಗಿಯೂ ಮುಂದುವರಿದಿದ್ದು ಬಾರತ ನಿಗದಿತ ಐವತ್ತು ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 336 ರನ್ ಕಲೆ ಹಾಕಿದೆ. ಈ ಮೂಲಕ ಪಾಕ್ ಗೆ ಗೆಲ್ಲಲು  337 ರನ್ ಗುರಿ ನೀಡಿದೆ.
ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 46.4 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿದ್ದಾಗ ಮಳೆ ಬಂದಿದ್ದು ಸದ್ಯ ಪಂದ್ಯವನ್ನು ಸ್ವಲ್ಪ ಸಮಯ ನಿಲ್ಲಿಸಲಾಗಿತ್ತು. 
ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 140, ಕೆಎಲ್ ರಾಹುಲ್ 57, ಹಾರ್ದಿಕ್ ಪಾಂಡ್ಯ 26, ವಿರಾಟ್ ಕೊಹ್ಲಿ 77 ಮತ್ತು ವಿಜಯ್ ಶಂಕರ್ ಅಜೇಯ 15 ರನ್  ಹಾಗೂ ಕೇದಾರ್ ಜಾಧವ್ 9 ರನ್ ಬಾರಿಸಿದ್ದಾರೆ.
ಪಾಕ್ ಪರ ಬೌಲಿಂಗ್ ನಲ್ಲಿ ಮೊಹಮ್ಮದ್ ಅಮೀರ್ ೩, ರಿಯಾಜ್ ವಹಾಬ್ ಮತ್ತು ಹಸನ್ ಅಲಿ ತಲಾ 1 ವಿಕೆಟ್ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com