ಶಾಕಿಬ್ ಶತಕದಾಟ: ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾಗೆ 7 ವಿಕೆಟ್ ಭರ್ಜರಿ ಜಯ

ಬಾಂಗ್ಲಾ ಸ್ಟಾರ್ ಆಟಗಾರ ಆಲ್ ರೌಂಡರ್ ಶಾಕಿಬ್ ಅಲ್ ಹಸನ್ ಶತಕ, ಲಿಟನ್ ದಾಸ್ ಅರ್ಧ ಶತಕದ ನೆರವಿನಿಂದ ಸೋಮವಾರ ನಡೆದ ವಿಶ್ವಕಪ್ ಕ್ರಿಕೆಟ್ ಸರಣಿಯ ವೆಸ್ಟ್....

Published: 17th June 2019 12:00 PM  |   Last Updated: 17th June 2019 11:30 AM   |  A+A-


All-round Shakib Al Hasan helps Bangladesh thrash West Indies

ಶಾಕಿಬ್ ಶತಕದಾಟ: ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾಗೆ 7 ವಿಕೆಟ್ ಭರ್ಜರಿ ಜಯ

Posted By : RHN RHN
Source : The New Indian Express
ಟೌಂಟನ್: ಬಾಂಗ್ಲಾ ಸ್ಟಾರ್ ಆಟಗಾರ ಆಲ್ ರೌಂಡರ್ ಶಾಕಿಬ್ ಅಲ್ ಹಸನ್ ಶತಕ, ಲಿಟನ್ ದಾಸ್ ಅರ್ಧ ಶತಕದ ನೆರವಿನಿಂದ ಸೋಮವಾರ ನಡೆದ ವಿಶ್ವಕಪ್ ಕ್ರಿಕೆಟ್ ಸರಣಿಯ ವೆಸ್ಟ್ ಇಂದೀಸ್ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ  ಏಳು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಇದರೊಡನೆ ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಚೇಸ್ ಮಾಡಿ ಗೆಲುವು ದಾಖಲಿಸಿದ ತಂಡ ಎಂಬ ಕೀರ್ತಿಗೆ ಬಾಂಗ್ಲಾ ಪಾತ್ರವಾಗಿದೆ.

ಶಾಕಿಬ್  99 ಎಸೆತಗಳಲ್ಲಿ 124 ಮತ್ತು ಲಿಂಟನ್ ದಾಸ್ 69 ಎಸೆತಗಳಲ್ಲಿ94 ರನ್ ಗಳಿಸಿ ಬಾಂಗ್ಲಾದೇಶವನ್ನು 3 ವಿಕೆಟ್ ಗೆ 322ರನ್ ಗಳಿಸುವಂತೆ ಮಾಡಿದ್ದರು.

ವಿಶ್ವಕಪ್ ಇತಿಹಾಸದಲ್ಲಿ ಈ ಹಿಂದೆ 2011ರಲ್ಲಿ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ 329-7 ಚೇಸ್ ಮಾಡಿ ಜಯ ಸಾಧಿಸಿದ ಹೊರತಾಗಿ ಇದು ಬೃಹತ್ ಮೊತ್ತ ಬೆನ್ನಟ್ಟಿ ಪಡೆದ ಗೆಲುವಾಗಿದೆ.

ಇನ್ನು ಸರಣಿಯಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಎರಡನೇ ಗೆಲುವು ಸಾಧಿಸಿದ ನಂತರ ಬಾಂಗ್ಲಾ ಪಡೆ ಸೆಮಿಫೈನಲ್ ತಲುಪುವ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp