ಭಾರತ ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲೇ ಆಕಳಿಸಿದ ಪಾಕ್ ನಾಯಕನ ಕಾಲೆಳೆದ ನೆಟಿಗರು, ವಿಡಿಯೋ!

ನಾಯಕನಿಗಿರುವ ಯಾವ ಲಕ್ಷಣವೂ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಗೆ ಇಲ್ಲ ಎಂದು ಈ ಹಿಂದೆ ಪಾಕ್ ಮಾಜಿ ಕ್ರಿಕೆಟಿಗ ತೀವ್ರವಾಗಿ ಟೀಕಿಸಿದ್ದು ಇದರ ಬೆನ್ನಲ್ಲೇ...

Published: 17th June 2019 12:00 PM  |   Last Updated: 17th June 2019 11:41 AM   |  A+A-


Sarfaraz Ahmed

ಸರ್ಫರಾಜ್ ಅಹ್ಮದ್

Posted By : VS VS
Source : Online Desk
ಮ್ಯಾಂಚೆಸ್ಟರ್: ನಾಯಕನಿಗಿರುವ ಯಾವ ಲಕ್ಷಣವೂ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಗೆ ಇಲ್ಲ ಎಂದು ಈ ಹಿಂದೆ ಪಾಕ್ ಮಾಜಿ ಕ್ರಿಕೆಟಿಗ ತೀವ್ರವಾಗಿ ಟೀಕಿಸಿದ್ದು ಇದರ ಬೆನ್ನಲ್ಲೇ ಭಾರತ ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲೇ ಆಳಕಿಸಿದ ಸರ್ಫರಾಜ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಟೀಂ ಇಂಡಿಯಾ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಈ ವೇಳೆ ಸರ್ಫರಾಜ್ ಅಹ್ಮದ್ ಆಕಳಿಸಿದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ನೋಡಿದ ನೆಟಿಗರು ಸರ್ಫರಾಜ್ ಕಾಳೆಲೆಯುತ್ತಿದ್ದಾರೆ.

ಸರ್ಫರಾಜ್ ಅಹ್ಮದ್ ಗ್ರಹಕ್ಕೆ ಇಳಿದ ಅತ್ಯಂತ ಉತ್ಸಾಹಿ ಕ್ರಿಕೆಟಿಗ. ತೀವ್ರವಾದ ಸಂದರ್ಭಗಳಲ್ಲಿಯೂ ಆಕಳಿಸುವ ಸಾಮರ್ಥ್ಯವಿದೆ. ಈ ಸಣ್ಣ ಆಕಳಿಯ ಮೂಲಕ ಅವರು ಭಾರತದ ವಿರುದ್ಧ ಗೆಲ್ಲುವ ಕನಸು ಕಂಡರು ಎಂದು ಲೇವಡಿ ಮಾಡುತ್ತಿದ್ದಾರೆ.

ಮ್ಯಾಂಚೆಸ್ಟರ್ ನಲ್ಲಿ ವಾತಾವರಣ ಹಿತಕರವಾಗಿದೆ. ನನಗೆ ವಿಶ್ರಾಂತಿ ಬೇಕಿದೆ. ಎರಡು ಪ್ಲೇಟ್ ಬಿರಿಯಾನಿ ತಿಂದ ನಂತರ ನನ್ನ ಪ್ರತಿಕ್ರಿಯೆ ಎಂದು ನೆಟಿಗರು ಸರ್ಫರಾಜ್ ಅಹ್ಮದ್ ಕಾಲೆಳೆದಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp