ನಾನೇನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾತೆಯಲ್ಲ: ವೀಣಾ ಮಲ್ಲಿಕ್ ಗೆ ಸಾನಿಯಾ ಖಡಕ್ ತಿರುಗೇಟು

ಭಾರತದ ವಿರುದ್ಧ ಪಾಕಿಸ್ತಾನ ತಂಡ ಸೋತ ಬೆನ್ನಲ್ಲೇ ಪಾಕ್ ತಂಡದ ವಿರುದ್ಧ ಟೀಕೆಗಳ ಸುರಿಮಳೆಯ ನಡುವೆಯೇ ಸಾನಿಯಾ ಮಿರ್ಜಾ ಅವರನ್ನೂ ಟೀಕಿಸಲು ಹೋಗಿ ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್ ಸರಿಯಾಗಿ ಪೆಟ್ಟು ತಿಂದಿದ್ದಾರೆ.

Published: 18th June 2019 12:00 PM  |   Last Updated: 18th June 2019 03:25 AM   |  A+A-


I am not Pakistan cricket team's dietitian nor am I their mother or principal or teacher: sania mirza's Fitting reply to Veena Mallik

ಸಂಗ್ರಹ ಚಿತ್ರ

Posted By : SVN SVN
Source : Online Desk
ನವದೆಹಲಿ: ಭಾರತದ ವಿರುದ್ಧ ಪಾಕಿಸ್ತಾನ ತಂಡ ಸೋತ ಬೆನ್ನಲ್ಲೇ ಪಾಕ್ ತಂಡದ ವಿರುದ್ಧ ಟೀಕೆಗಳ ಸುರಿಮಳೆಯ ನಡುವೆಯೇ ಸಾನಿಯಾ ಮಿರ್ಜಾ ಅವರನ್ನೂ ಟೀಕಿಸಲು ಹೋಗಿ ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್ ಸರಿಯಾಗಿ ಪೆಟ್ಟು ತಿಂದಿದ್ದಾರೆ.

ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ 89 ರನ್ ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಭಾರತದ ವಿರುದ್ಧ ಸೋತಿದ್ದಕ್ಕೆ ಪಾಕ್ ತಂಡವನ್ನೂ ಹೀನಾಮಾನವಾಗಿ ತೆಗಳುತ್ತಿರುವ ಅಲ್ಲಿನ ಕ್ರಿಕೆಟ್ ಅಭಿಮಾನಿಗಳು ಪಾಕ್ ಕ್ರಿಕೆಟಿಗರು ಶೀಶ ಕೆಫೆಯಲ್ಲಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಈ ಫೋಟೋ ಇದೀಗ ವೈರಲ್ ಆಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್ ಮತ್ತು ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ನಡುವೆ ಟ್ವೀಟ್ ಸಮರ ತಾರಕಕ್ಕೇರಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪಾಕ್ ಕ್ರಿಕೆಟಿಗರ ಫೋಟೋ ಕುರಿತು ಟ್ವೀಟ್ ಮಾಡಿದ್ದ ವೀಣಾ ಮಲಿಕ್, 'ಈ ರೀತಿ ನೀನು ಮಾಡಿದ್ದು ಸರಿಯಲ್ಲ. ಕ್ರೀಡಾಪಟುಗಳಿಗೆ ಶೀಶ ಕೆಫೆ ಒಳ್ಳೆಯದಲ್ಲ. ನೀನೂ ಒಬ್ಬಳು ಕ್ರೀಡಾಪಟು, ಮಗುವಿನ ತಾಯಿ ಅನ್ನೋದನ್ನು ನೀನು ಅರಿತುಕೊಳ್ಳಬೇಕು' ಎಂದು ಸಾನಿಯಾಗೆ ಟ್ವೀಟ್ ಮಾಡಿದ್ದಾರೆ. 

ಇದಕ್ಕೆ ಖಾರವಾಗೇ ಪ್ರತಿಕ್ರಿಯಿಸಿರುವ ಭಾರತದ ಟೆನಿಸ್ ತಾರೆ ಸಾನಿಯಾ, 'ವೀಣಾ, ನನ್ನ ಮಗುವನ್ನು ನಾನು ಶೀಶಾ ಕೆಫೆಗೆ ಕರೆದೊಯ್ದಿಲ್ಲ. ಆದರೂ ಇದು ನಿನಗಾಗಲೀ ಬೇರೆ ಯಾರಿಗಾಗಲೀ ಸಂಬಂಧಿಸಿದ ವಿಚಾರವೇ ಅಲ್ಲ. ಇದು ನನ್ನ ವೈಯಕ್ತಿಯ ವಿಚಾರ. ಪಾಕ್ ಕ್ರಿಕೆಟಿಗರ ಬಗ್ಗೆ ಕಾಳಜಿ ವಹಿಸಲು ನಾನೇನು ಅವರ ತಾಯಿಯಲ್ಲ, ಡೈಯಟಿಷಿಯನ್ ಅಥವಾ ಅವರ ಕಾಲೇಜಿನ ಪ್ರಾಂಶುಪಾಲೆಯೂ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸಾನಿಯಾ ಹಾಗೂ ವೀಣಾ ಮಲ್ಲಿಕ್ ರ ಈ ಟ್ವೀಟ್ ವಾರ್ ಇದೀಗ ವೈರಲ್ ಆಗಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp