ಪಾಕ್ ತಂಡದ ತರಬೇತುದಾರನಾದರೆ ಆ ರಾಷ್ಟ್ರದ ಬ್ಯಾಟ್ಸ್ ಮನ್ ಗಳಿಗೆ ನೆರವು- ರೋಹಿತ್!

ಒಂದು ವೇಳೆ ಪಾಕಿಸ್ತಾನದ ತರಬೇತುದಾರನಾದರೆ ಆ ರಾಷ್ಟ್ರದ ಬ್ಯಾಟ್ಸ್ ಮನ್ ಗಳಿಗೆ ನೆರವು ನೀಡುವುದಾಗಿ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ವ್ಯಂಗ್ಯವಾಗಿ ಹೇಳಿದ್ದಾರೆ
ರೋಹಿತ್ ಶರ್ಮಾ
ರೋಹಿತ್ ಶರ್ಮಾ
ಮ್ಯಾಂಚೆಸ್ಟರ್ : ಒಂದು ವೇಳೆ ಪಾಕಿಸ್ತಾನದ ತರಬೇತುದಾರನಾದರೆ ಆ ರಾಷ್ಟ್ರದ ಬ್ಯಾಟ್ಸ್ ಮನ್ ಗಳಿಗೆ  ನೆರವು ನೀಡುವುದಾಗಿ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ  ಹೇಳಿದ್ದಾರೆ.
ಭಾನುವಾರ ನಡೆದ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ 89 ರನ್ ಗಳ ಅಂತರದಿಂದ ಗೆಲುವು ಸಾಧಿಸಿದ ಬಳಿಕ ಪಾಕಿಸ್ತಾನ ಬ್ಯಾಟ್ಸ್ ಮನ್ ಗಳಿಗೆ ಯಾವ ರೀತಿಯ ಸಲಹೆ ನೀಡುತ್ತಿರಿ ಎಂದು ಆ ರಾಷ್ಟ್ರದ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ರೋಹಿತ್ ಶರ್ಮಾ ನಗುತ್ತಾ  ವ್ಯಂಗ್ಯವಾಗಿ ಹೇಳಿದರು.
ಒಂದು ವೇಳೆ ಪಾಕ್ ತಂಡದ ತರಬೇತುದಾರನಾದರೆ  ಬ್ಯಾಟಿಂಗ್ ಕುರಿತು ಆ ರಾಷ್ಟ್ರದ ಬ್ಯಾಟ್ಸ್ ಮನ್ ಗಳಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡುವುದಕ್ಕೆ ಆಗುತ್ತದೆ.ಇಲ್ಲವಾದರೆ ಹೇಗೆ ಹೇಳಲು ಸಾಧ್ಯ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com