ಹಾಲಿ ಭಾರತ ತಂಡ ಪಾಕಿಸ್ತಾನವನ್ನು ಬೆದರಿಸುವಂತಿದೆ: ವಕಾರ್ ಯೂನಿಸ್

ಪ್ರಸ್ತುತ ಇರುವ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ತಂಡವನ್ನು ಬೆದರಿಸುವಂತಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಹೇಳಿದ್ದಾರೆ.

Published: 18th June 2019 12:00 PM  |   Last Updated: 18th June 2019 03:25 AM   |  A+A-


ಸಂಗ್ರಹ ಚಿತ್ರ

Posted By : SVN SVN
Source : Online Desk
ಲಂಡನ್: ಪ್ರಸ್ತುತ ಇರುವ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ತಂಡವನ್ನು ಬೆದರಿಸುವಂತಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಹೇಳಿದ್ದಾರೆ.

ಮ್ಯಾಂಚೆಸ್ಟರ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ 89 ರನ್ ಗಳ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ, ಪಾಕಿಸ್ತಾನ ತಂಡದ ವಿರುದ್ಧ ವ್ಯಾಪಕ ಟೀಕೆಗಳ ಸುರಿಮಳೆಯೇ ಬೀಳುತ್ತಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ಪಾಕ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಇದರ ಬೆನ್ನಲ್ಲೇ ಮತ್ತೋರ್ವ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಕೂಡ ಪಾಕಿಸ್ತಾನ ತಂಡದ ವಿರುದ್ಧ ಟೀಕೆ ಮಾಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಭಾರತ ತಂಡದ ಮೇಲೆ ಒತ್ತಡ ಹೇರುವಲ್ಲಿ ಪಾಕಿಸ್ತಾನ ವಿಫಲವಾಗಿದ್ದು, ಯಾವುದೇ ವಿಭಾಗದಲ್ಲೂ ಭಾರತ ತಂಡದೊಂದಿಗೆ ಸಾಮ್ಯತೆಯೇ ಇಲ್ಲ. 1990ರಲ್ಲಿದ್ದ ಪಾಕಿಸ್ತಾನ ತಂಡಕ್ಕೂ ಈಗ ಇರುವ ಪಾಕಿಸ್ತಾನ ತಂಡಕ್ಕೂ ಭಾರಿ ವ್ಯತ್ಯಾಸವಿದೆ. ಭಾರತ ತಂಡದಲ್ಲೂ ಸಾಕಷ್ಟು ಬದಲಾವಣೆಯಾಗಿದ್ದು, ಆದರೆ ಆ ಬದಲಾವಣೆ ಸಕಾರಾತ್ಮಕವಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ತಂಡದ ಆಟಗಾರರು ತಮ್ಮ ವೈಯುಕ್ತಿಕ ಪ್ರದರ್ಶನದ ಮೇಲೆ ಗಮನ ಕೇಂದ್ರೀಕರಿಸಿದ್ದರೆ, ಭಾರತ ತಂಡ ಸಾಂಘಿಕ ಪ್ರದರ್ಶನದ ಮೇಲೆ ಗಮನ ಹರಿಸಿ ಯಶಸ್ಸು ಸಾಧಿಸಿದೆ. ಭಾರತ ತಂಡದ ಪ್ರತೀಯೊಬ್ಬ ಆಟಗಾರನಿಗೂ ತನ್ನ ಜವಾಬ್ದಾರಿಯ ಅರಿವಿದೆ. ಆ ಜವಾಬ್ದಾರಿಯನ್ನು ಅತ್ಯಂತ ಚಾಕಚಕ್ಯತೆಯಿಂದ ನಿಭಾಯಿಸಿದ್ದಾರೆ. 90ರ ದಶಕದಲ್ಲಿ ಪಾಕಿಸ್ತಾನ ತಂಡ ಉತ್ತಮವಾಗಿತ್ತು. ಹಾಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು ಬೆದರಿಸುವಂತಿದೆ ಎಂದು ವಕಾರ್ ಹೇಳಿದ್ದಾರೆ.

ಪಾಕಿಸ್ತಾನದ ಮಹಮದ್ ಆಮೀರ್ ರನ್ನು ಹೊರತು ಪಡಿಸಿದರೆ ಉಳಿದ ಆಟಗಾರರ ಬೌಲಿಂಗ್ ಪ್ರದರ್ಶನ ಸಪ್ಪೆಯಾಗಿತ್ತು. ಭಾರತದ ಬ್ಯಾಟಿಂಗ್ ಮೇಲೆ ಒತ್ತಡ ಹೇರುವ ಯಾವುದೇ ರೀತಿಯ ಪ್ರಯತ್ನ ಇತರೆ ಬೌಲರ್ ಗಳಿಂದ ಕಾಣಲೇ ಇಲ್ಲ. ಮಹಮದ್ ಆಮೀರ್ ಭಾರತೀಯ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೇರಿದ್ದರು ಎಂದು ವಕಾರ್ ಹೇಳಿದರು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp