ನಿವೃತ್ತಿ ಬೆನ್ನಲ್ಲೇ, ವಿದೇಶಿ ಟಿ-20 ಆಡಲು ಬಿಸಿಸಿಐ ಅನುಮತಿ ಕೋರಿದ ಯುವರಾಜ್‌ ಸಿಂಗ್‌

ಕಳೆದ ವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದ ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, ವಿದೇಶಿ ಟಿ-20 ಲೀಗ್ ಗಳಲ್ಲಿ ಆಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಅನುಮತಿ ಕೋರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕಳೆದ ವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದ ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, ವಿದೇಶಿ ಟಿ-20 ಲೀಗ್ ಗಳಲ್ಲಿ ಆಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಅನುಮತಿ ಕೋರಿದ್ದಾರೆ.
37ರ ಪ್ರಾಯದ ಯುವರಾಜ್‌ ಸಿಂಗ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇನ್ನು ಮುಂದೆ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ವಿದೇಶಿ ಟಿ-20 ಟೂರ್ನಿ ಆಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ನಿವೃತ್ತಿ ಬಳಿಕ ಕೆಲ ವರ್ಷಗಳ ಕಾಲ ನಾನು ಕ್ರಿಕೆಟ್ ನ ಖುಷಿಯನ್ನು ಅನುಭವಿಸಲು ಇಚ್ಛಿಸುತ್ತೇನೆ. ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಕುರಿತು ಆಲೋಚಿಸಿ ಒತ್ತಡಕ್ಕೆ ಒಳಗಾಗಿದ್ದೇನೆ. ನನಗೀಗ ಬ್ರೇಕ್ ಸಿಕ್ಕಿದೆ. ಹೀಗಾಗಿ ವಿದೇಶಿ ಟಿ20 ಲೀಗ್ ಗಳಲ್ಲಿ ಆಡಲು ನನಗೆ ಅನುಮತಿ ನೀಡಿ ಎಂದು ಯುವಿ ಬಿಸಿಸಿಐಗೆ ಮನವಿ ಮಾಡಿದ್ದಾರೆ.
ಯುವಿ ಮನವಿ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, 'ಹಲವು ವಿದೇಶಿ ಟಿ-20 ಲೀಗ್‌ಗಳಲ್ಲಿ ಆಡಲು ಆಸಕ್ತಿ ಹೊಂದಿರುವ ಯುವರಾಜ್‌, ಬಿಸಿಸಿಐ ಅನುಮತಿ ಇಲ್ಲದೆ ಆಡಲು ಅವಕಾಶವಿಲ್ಲ. ಹಾಗಾಗಿ, ಅವರು ಭಾರತೀಯ ಕ್ರಿಕೆಟ್‌ ಮಂಡಳಿಗೆ ಅನುಮತಿ ಕೋರಿದ್ದಾರೆ" ಎಂದು ಬಿಸಿಸಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ನು ಈಗಾಗಲೇ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿರುವ ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್ ಯುಎಇನಲ್ಲಿ ನಡೆದ ಮೊಟ್ಟಮೊದಲ ಟಿ10 ಲೀಗ್ ನಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಉಭಯ ಆಟಗಾರರು ಬಿಸಿಸಿಐನ ಅನುಮತಿಯೊಂದಿಗೆ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಅಂತೆಯೇ ಪಠಾಣ್ ಸಹೋದರರಾದ ಯೂಸುಫ್ ಹಾಗೂ ಇರ್ಫಾನ್ ಪಠಾಣ್ ಅವರೂ ಕೂಡ ಈ ಹಿಂದೆ ಬಿಸಿಸಿಐ ಅನುಮತಿಯೊಂದಿಗೆ ಕೆರಿಬಿಯನ್ ಲೀಗ್ ನಲ್ಲಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com