ನಕಲಿ ಜನನ ಪ್ರಮಾಣ ಪತ್ರ: ಮುಂಬೈ ಇಂಡಿಯನ್ಸ್ ವೇಗಿಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ!

ನಕಲಿ ಜನನ ಪ್ರಮಾಣ ಪತ್ರ ನೀಡಿದ ಆರೋಪದ ಮೇರೆಗೆ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿಗೆ ಬಿಸಿಸಿಐ 2 ವರ್ಷ ನಿಷೇಧ ಹೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ನಕಲಿ ಜನನ ಪ್ರಮಾಣ ಪತ್ರ ನೀಡಿದ ಆರೋಪದ ಮೇರೆಗೆ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿಗೆ ಬಿಸಿಸಿಐ 2 ವರ್ಷ ನಿಷೇಧ ಹೇರಿದೆ.
ಟೀಂ ಇಂಡಿಯಾದ ಅಂಡರ್ 19 ಕ್ರಿಕೆಟ್ ತಂಡದ ಉದಯೋನ್ಮಖ ಆಟಗಾರ ರಸೀಖ್ ಸಲಾಂ ತನ್ನ ಜನನ ಪ್ರಮಾಣ ಪತ್ರವನ್ನೇ ನಕಲು ಮಾಡಿ ಇದೀಗ ಸಿಕ್ಕಿ ಬಿದ್ದಿದ್ದಾರೆ. ಪ್ರಕರಣದಲ್ಲಿ ಅವರ ಅಪರಾಧ ಸಾಬೀತಾಗಿದ್ದು, ಇದೇ ಕಾರಣಕ್ಕೆ ಜಮ್ಮು ಮತ್ತು ಕಾಶ್ಮೀರದ ಆಟಗಾರನಿಗೆ ಬಿಸಿಸಿಐ 2 ವರ್ಷ ನಿಷೇಧ ಹೇರಿದೆ. ಈ ಬಗ್ಗೆ ಬಿಸಿಸಿಐ ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಿದೆ.
2018ರಲ್ಲಿ ಸಲಾಂ ಜಮ್ಮು ಮತ್ತು ಕಾಶ್ಮೀರ ತಂಡದ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಬಳಿಕ 2019ರಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಸಲಾಂ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರ ಗಮನ ಸೆಳೆದು ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದರು. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಸಲಾಂ 45 ರನ್ ಗಳಿಸಿ 7 ವಿಕೆಟ್ ಪಡೆದಿದ್ದಾರೆ.
ಇನ್ನು ಈ ಹಿಂದೆ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಅಂಡರ್ 19 ತ್ರಿಕೋನ ಏಕದಿನ ಸರಣಿಗೆ ಸಲಾಂ ಆಯ್ಕೆಯಾಗಿದ್ದರು. ಆದರೆ ಪ್ರಸ್ತುತ ಬಿಸಿಸಿಐ ನಿಷೇಧ ಹೇರಿರುವದರಿಂದ ಆತನ ಬದಲಿಗೆ ಪ್ರಭಾತ್ ಮೌರ್ಯಗೆ ಅವಕಾಶ ಕಲ್ಪಿಸಲಾಗಿದೆ. ಇದೇ ಜುಲೈ 21ರಿಂದ ಇಂಗ್ಲೆಂಡ್ ನಲ್ಲಿ ತ್ರಿಕೋನ ಏಕದಿನ ಸರಣಿ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com