ಐಸಿಸಿ ವಿಶ್ವಕಪ್ ರೋಚಕ ಪಂದ್ಯ: ಹರಿಣಗಳನ್ನು ಮಣಿಸಿದ ಕಿವೀಸ್ ಗೆ 4 ವಿಕೆಟ್ ಜಯ

ಐಸಿಸಿ ವಿಶ್ವಕಪ್ ಸರಣಿಯ ಬುಧವಾರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗು ನ್ಯೂಜಿಲ್ಯಾಂಡ್ ನಡುವೆ ರೋಚಕ ಹಣಾಹಣಿ ನಡೆದಿದ್ದು ಆಫ್ರಿಕಾ ಮಣಿಸಿದ ಕಿವೀಸ್ ನಾಲ್ಕು ವಿಕೆಟ್ ಜಯ ಸಾಧಿಸಿದೆ.

Published: 20th June 2019 12:00 PM  |   Last Updated: 20th June 2019 12:15 PM   |  A+A-


New Zealand vs South Africa ICC World Cup 2019: Williamson Steers NZ to 4 Wicket Win With Stunning Ton'

ಐಸಿಸಿ ವಿಶ್ವಕಪ್ ರೋಚಕ ಪಂದ್ಯ: ಹರಿಣಗಳನ್ನು ಮಣಿಸಿದ ಕಿವೀಸ್ ಗೆ 4 ವಿಕೆಟ್ ಜಯ

Posted By : RHN RHN
Source : Online Desk
ಬರ್ಮಿಂಗ್‌ಹ್ಯಾಮ್" ಐಸಿಸಿ ವಿಶ್ವಕಪ್ ಸರಣಿಯ ಬುಧವಾರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗು ನ್ಯೂಜಿಲ್ಯಾಂಡ್ ನಡುವೆ ರೋಚಕ ಹಣಾಹಣಿ ನಡೆದಿದ್ದು  ಆಫ್ರಿಕಾ ಮಣಿಸಿದ ಕಿವೀಸ್ ನಾಲ್ಕು ವಿಕೆಟ್ ಜಯ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ ನಡೆಸಿದ್ದ ಆಫ್ರಿಕಾ ತಂಡ ಮಳೆಯಿಂದಾಗಿ 49 ಓವರ್ ಗೆ ಸೀಮಿತವಾದ ಪಂದ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 241 ರನ್ ಸಾಧಾರಣ ಮೊತ್ತ ಕಲೆ ಹಾಕಿತ್ತು.

ರಾಸೀ ವ್ಯಾನ್ ಡೆರ್ ದುಸಾನ್ (67*) ಹಾಗೂ ಹಾಶೀಮ್ ಆಮ್ಲಾ (55) ಆಫ್ರಿಕಾ ಪರ ಉತ್ತಮ ಬ್ಯಾಟಿಂಗ್ ನಡೆಸಿದ್ದರು.ಇನ್ನು ಪ್ಲೆಸಿಸ್ 23, ಮಾರ್ಕ್ರಂ 38, ಮಿಲ್ಲರ್ 36 ಪೆಹ್ಲುಕಾಯೊ (0) ಹಾಗೂ ಕ್ರಿಸ್ ಮೋರಿಸ್ (6*) ರನ್ ಗಳಿಸಿದ್ದರು. 

ಆಫ್ರಿಕಾ ಒಡ್ಡಿದ ಸಾಧಾರಣ ಗುರಿ ಬೆನ್ನತ್ತಿದ ಕಿವೀಸ್ ಪಡೆ ನಾಯಕ ಕೇನ್ ವಿಲಿಯಮ್ಸನ್ ಶತಕ (106*) ನೆರವಿನೊಡನೆ ಸುಲಭವಾಗಿ  ಜಯದ ಮಾಲೆ ಧರಿಸಿತು.

ನ್ಯೂಜಿಲ್ಯಾಂಡ್ ಪರ  ಕಾಲಿನ್ ಮನ್ರೊರನ್ನು (9) ಮಾರ್ಟಿನ್ ಗಪ್ಟಿಲ್ (35) ರೋಸ್ ಟೇಲರ್ (1)  ಟಾಮ್ ಲೇಥಮ್‌ಗೂ (1) ನೀಶಮ್ (23) ಗ್ರ್ಯಾಂಡ್‌ಹೋಮ್ (60 )ರನ್ ಬಾರಿಸಿದ್ದರು. 

ತಂಡವು ಅಂತಿಮ ಮೂರು ಬಾಲ್ ಬಾಕಿಒ ಇರುವಾಗಲೇ 48.3 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿದೆ.

ದಕ್ಷಿಣ ಆಫ್ರಿಕಾ ಪರ ಕ್ರಿಸ್ ಮೋರಿಸ್ ಮೂರು ವಿಕೆಟ್ ಪಡೆದು ಗಮನ ಸೆಳೆದರು.

ಈ ಗೆಲುವಿನೊಡನೆ ಸರಣಿಯಲ್ಲಿ ಆಡಿದ ಐದು ಪಂದ್ಯದಲ್ಲಿ ನಾಲ್ಕನ್ನು ಗೆದ್ದಿರುವ ಕಿವೀಸ್  ಇನ್ನೊಂದು ಡ್ರಾ ದೊಡನೆ ಒಂಬತ್ತು ಅಂಕ ಪಡೆದು ಅಂಕಪಟ್ಟಿಯ ಅಗ್ರಸ್ಥಾನಿಯಾಗಿದೆ.

ದ. ಆಫ್ರಿಕಾ ತಾನು ಆಡಿದ್ದ ಆರು ಪಮ್ದ್ಯಗಳ ಪೈಕಿ ನಾಲ್ಕನ್ನು ಸೋತು ಎಂಟನೇಸ್ಥಾನದಲ್ಲೇ ಮುಂದುವರಿದಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp