ಜೀವನಕ್ಕೆ ಕ್ರಿಕೆಟ್‌ ಅದ್ಭುತ ಶಿಕ್ಷಕ: ವಿರಾಟ್ ಕೊಹ್ಲಿ

ಮಕ್ಕಳ ಬದುಕಿಗೆ ಕ್ರಿಕೆಟ್ ಅದ್ಭುತ ಶಿಕ್ಷಕನಾಗಬಲ್ಲದು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಸೌಥ್ಯಾಂಪ್ಟನ್‌ ಶಾಲಾ ಮಕ್ಕಳೊಂದಿಗೆ ಕೊಹ್ಲಿ
ಸೌಥ್ಯಾಂಪ್ಟನ್‌ ಶಾಲಾ ಮಕ್ಕಳೊಂದಿಗೆ ಕೊಹ್ಲಿ
ಸೌಥ್ಯಾಂಪ್ಟನ್‌: ಮಕ್ಕಳ ಬದುಕಿಗೆ ಕ್ರಿಕೆಟ್ ಅದ್ಭುತ ಶಿಕ್ಷಕನಾಗಬಲ್ಲದು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಆಫ್ಘಾನಿಸ್ತಾನದ ವಿರುದ್ಧ ಪಂದ್ಯಕ್ಕೆ ಸಜ್ಜಾಗುತ್ತಿರುವ ಬೆನ್ನಲ್ಲೇ ಸೌಥ್ಯಾಂಪ್ಟನ್‌ ಶಾಲಾ ಮಕ್ಕಳೊಂದಿಗೆ ಟೀಂ ಇಂಡಿಯಾ ಆಟಗಾರರು ಕೆಲ ಸಮಯ ಕಳೆದಿದ್ದು, ಪ್ರಮುಖವಾಗಿ ಹಾರ್ದಿಕ್ ಪಾಂಡ್ಯಾ ಮತ್ತು ವಿರಾಟ್ ಕೊಹ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಮಕ್ಕಳಿಗೆ ಮನರಂಜನೆ ನೀಡಿದ್ದಾರೆ.
ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಕ್ರಿಕೆಟ್ ವಿಶ್ವಕಪ್ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವೇಳೆ ಮಾತನಾಡಿರುವ ಕೊಹ್ಲಿ, 'ಕ್ರಿಕೆಟ್ ನಿಜವಾಗಿಯೂ ಮಕ್ಕಳ ಜೀವನದಲ್ಲಿ ಒಂದು ಬದಲಾವಣೆಯನ್ನು ತರಬಲ್ಲದು ಎಂದು ನಾನು ನಂಬುತ್ತೇನೆ. ಇದು ಮನುಷ್ಯನಾಗಿ ನಿಮ್ಮನ್ನು ನಿಜವಾಗಿಯೂ ಸುಧಾರಿಸುತ್ತದೆ. ಏಕೆಂದರೆ ಅದು ನಿಮಗೆ ಜೀವನಕ್ಕೆ ಹೋಲುವ ಹಲವು ಹಂತಗಳ ಮೂಲಕ ಹೋಗುವಂತೆ ಮಾಡುತ್ತದೆ" ಎಂದು ಹೇಳಿದ್ದಾರೆ. 
ಅಂತೆಯೇ ಜೀವನದಲ್ಲಾಗುವ ಹಲವು ಏಳು-ಬೀಳುಗಳನ್ನು ಅರ್ಥ ಮಾಡಿಕೊಳ್ಳಲು, ಕ್ಲಿಷ್ಟಕರ ಸನ್ನಿವೇಶಗಳನ್ನು ಹೇಗೆ ನಿಭಾಯಿಸಬೇಕು ಸೇರಿದಂತೆ ಹಲವು ಜೀವನದ ಪಾಠಗನ್ನು ಕ್ರಿಕೆಟ್ ಕಲಿಸಿದೆ ಎಂದು ಕೊಹ್ಲಿ ಹೇಳಿದ್ದಾರೆ. 
ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಲವು ವೈಯಕ್ತಿಕ ದಾಖಲೆಗಳನ್ನು ಕ್ರಿಕೆಟ್‌ ನಲ್ಲಿ ಮಾಡಿದ್ದಾರೆ ಹಾಗೂ ಇವರ ನಾಯಕತ್ವದಲ್ಲಿ ಟೀಂ ಇಂಡಿಯಾ ಕೂಡ ವಿಶಿಷ್ಠ ಸಾಧನೆ ಮಾಡಿದೆ. ಹಾಗಾಗಿ, ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದರೆ ತಪ್ಪಾಗಲಾರದು. ಇಂಗ್ಲೆಂಡ್‌ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಸದ್ಯ ಭಾರತ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಭಾರತ ಗೆಲುವು ಪಡೆದಿದ್ದು, ಮತ್ತೊಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com