ಭಾರತ vs ಅಫ್ಘನ್ ಪಂದ್ಯ: ನಿಧಾನಗತಿಯ ಬ್ಯಾಟಿಂಗ್ , ಧೋನಿ, ಕೇದಾರ್ ಜಾದವ್ ವಿರುದ್ಧ ಟ್ವಿಟಿಗರ ಆಕ್ರೋಶ

ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ vs ಅಫ್ಘಾನ್ ನಡುವಿನ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ ಆಟಗಾರರಾದ ಎಂ.ಎಸ್. ಧೋನಿ ಹಾಗೂ ಕೇದಾರ್ ಜಾದವ್ ವಿರುದ್ಧ ಟ್ವಿಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂ.ಎಸ್. ಧೋನಿ
ಎಂ.ಎಸ್. ಧೋನಿ
ಸೌಂಥಪ್ಟನ್ : ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ vs ಅಫ್ಘಾನ್ ನಡುವಿನ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ ಆಟಗಾರರಾದ ಎಂ.ಎಸ್. ಧೋನಿ ಹಾಗೂ ಕೇದಾರ್ ಜಾದವ್ ವಿರುದ್ಧ ಟ್ವಿಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರಿಬ್ಬರ ಐದನೇ ವಿಕೆಟ್ ಜೊತೆಯಾಟದಲ್ಲಿ 84 ಎಸೆತಗಳಲ್ಲಿ 57 ರನ್ ಬಂದಿದೆ ಇದು ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಧೋನಿ ನಿವೃತ್ತಿಯಾಗುವ ಸಂದರ್ಭ ಬಂದಿದೆ ಎಂದು ಕಾಲೆಳೆದಿದ್ದಾರೆ.
ಆದಾಗ್ಯೂ, ಎಂಎಸ್ ಧೋನಿ 52 ಎಸೆತಗಳಲ್ಲಿ 28 ರನ್ ಗಳಿಸಿದರೆ  ಕೇದಾರ್ ಜಾದವ್  68 ಎಸೆತಗಳಲ್ಲಿ 52 ರನ್ ಕಲೆ ಹಾಕಿದರು.ಈ ಮೂಲಕ ಭಾರತ ನಿಗದಿತ ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 224 ರನ್ ಗಳಿಸಲಷ್ಟೇ ಶಕ್ತವಾಯಿತು.ಇದರಿಂದ ಆಕ್ರೋಶಗೊಂಡಿರುವ ಟ್ವಿಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ತೀವ್ರ ಟೀಕೆ ಮಾಡುತ್ತಿದ್ದಾರೆ.
 ರಿಷಭ್ ಪಂತ್ ಬದಲಿಗೆ ಕೇದಾರ್ ಜಾದವ್ ಆಯ್ಕೆ ಮಾಡಿರುವುದನ್ನು  ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್  ಮೈಕೇಲ್ ವಾಘನ್ ಟ್ವಿಟರ್ ನಲ್ಲಿ ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com