ಅಂಪೈರ್ ಜೊತೆ ಅತಿರೇಕದ ವರ್ತನೆ, ವಿರಾಟ್ ಕೊಹ್ಲಿಗೆ ಭಾರೀ ದಂಡ!
ವಿಶ್ವಕಪ್ ಟೂರ್ನಿಯ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಕ್ರೋಶದಲ್ಲಿ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)...
Published: 23rd June 2019 12:00 PM | Last Updated: 23rd June 2019 02:38 AM | A+A A-

ವಿರಾಟ್ ಕೊಹ್ಲಿ
Source : Online Desk
ಸೌತಾಂಪ್ಟನ್: ವಿಶ್ವಕಪ್ ಟೂರ್ನಿಯ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಕ್ರೋಶದಲ್ಲಿ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಭಾರೀ ದಂಡ ವಿಧಿಸಿದೆ.
ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘಿಸಿದ ಆರೋಪದ ಮೇಲೆ ವಿರಾಟ್ ಕೊಹ್ಲಿಗೆ ಒಂದು ಪಂದ್ಯದ ಶೇಕಡ 25ರಷ್ಟು ದಂಡ ವಿಧಿಸಲಾಗಿದೆ.
ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಅಗ್ರೇಷನ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಎಂದೂ ಹಿಂಜರಿಯದ ಕೊಹ್ಲಿ ಡಿಆರ್ಎಸ್ ಮನವಿ ತಪ್ಪಿದಾಗ ಅಂಪೈರ್ ಮುಂದೆಯೇ ಕೈ ಮುಗಿದ ಘಟನೆ ನಡೆದಿದೆ.
ಆಫ್ಘಾನ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 11 ರನ್ ಗಳ ವಿರೋಚಿತ ಗೆಲುವು ಸಾಧಿಸಿತ್ತು. ಆದರೆ ಕ್ರಿಕೆಟ್ ಶಿಶು ವಿರುದ್ಧ ಸೋಲಿನ ಹತಾಶೆಯಲ್ಲಿದ್ದಾಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊಂಚ ಅಗ್ರೇಸೀವ್ ಆಗಿ ಕಾಣಿಸಿಕೊಂಡಿದ್ದರು.
@imVkohli requesting umpires to help to win this match pic.twitter.com/cVCTDtDObG
— Charith NH (@CharithNHettia1) June 22, 2019
Stay up to date on all the latest ಕ್ರಿಕೆಟ್ news with The Kannadaprabha App. Download now