ವಿಶ್ವಕಪ್ ಕ್ರಿಕೆಟ್ : ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಪಾಕಿಸ್ತಾನ, ಸೆಮಿಸ್ ಪ್ರವೇಶಿಸುವ ಕನಸು ಜೀವಂತ

ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೆ ಲಯಕ್ಕೆ ಮರಳಿರುವ ಪಾಕಿಸ್ತಾನ 49 ರನ್ ಗಳ ಅಂತರದಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ. ಈ ಮೂಲಕ ಸೆಮಿ ಫೈನಲ್ ಪ್ರವೇಶಿಸುವ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.
ಪಾಕ್ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರು
ಪಾಕ್ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರು
ಲಾರ್ಡ್ಸ್ :  ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೆ ಲಯಕ್ಕೆ ಮರಳಿರುವ ಪಾಕಿಸ್ತಾನ  49 ರನ್ ಗಳ ಅಂತರದಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ. ಈ ಮೂಲಕ ಸೆಮಿ ಫೈನಲ್ ಪ್ರವೇಶಿಸುವ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. 
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತು. ತಾಳ್ಮೆಯ ಆಟವಾಡಿದ ಪಾಕಿಸ್ತಾನದ ಆರಂಭಿಕ ಜೋಡಿ ಇಮಾನ್ ಉಲ್ ಹಕ್  44 ಹಾಗೂ ಫಕ್ರ್ ಜಮಾನ್ 44 ರನ್ ಗಳಿಂದ ಮೊದಲ ವಿಕೆಟ್ ಜೊತೆಯಾಟದಲ್ಲಿ 81 ರನ್ ಗಳಿಸಿದರು. ಜಮಾನ್ ಆಮ್ಲಾಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ, ತಾಹೀರ್  ಇಮಾಮ್ ಅವರನ್ನು ಔಟ್ ಮಾಡಿದರು.
ಮೂರನೇ ವಿಕೆಟ್ ಜೊತೆಯಾಟದಲ್ಲಿ ಬಾಬರ್ ಅಜಂ ಬೌಲರ್ ಗಳನ್ನು ಕಾಡಿದರು. ಇಪ್ಪತ್ತು ರನ್ ಗಳಿಸಿದ ಹಫೀಜ್ ಅವರನ್ನು ಏಡನ್ ಮರ್ಕರಂ ಎಲ್ ಬಿಡಬ್ಲ್ಯೂ ಬಲೆಗೆ ಕೆಡವಿದರು. ನಂತರ ಕ್ರೀಸ್ ಗೆ ಬಂದ ಹ್ಯಾರಿಸ್ ಸೊಹೈಲ್  ಉತ್ತಮ ಪ್ರದರ್ಶನ ನೀಡಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 80 ರನ್  ಕಲೆಹಾಕಿದರು.  
ಸೊಹೈಲ್ 59 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಮೂಲಕ 89 ರನ್ ಗಳಿಸಿದರು. ಅವರು ಕೊನೆಯ ಓವರ್ ನಲ್ಲಿ ಔಟಾಗುವ ಮುನ್ನ ತಂಡವು ಮುನ್ನೂರು ರನ್ ಗಳ ಗಡಿ ದಾಟುವಂತೆ ನೋಡಿಕೊಂಡರು. ದಕ್ಷಿಣ ಆಫ್ರಿಕಾ ತಂಡದ ಪರ ಲುಂಗಿ ಗಿಡಿ ಮೂರು ವಿಕೆಟ್ ಗಳನ್ನು ಕಬಳಿಸಿದರು.
ಈ ಗೆಲುವಿನ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ 50 ಓವರ್ ಗಳಲ್ಲಿ 9 ವಿಕೆಟ್ ಗಳಿಗೆ 259 ರನ್ ಗಳಿಸಲಷ್ಟೇ ಶಕ್ತವಾಯಿತು.  ಈ ಮೂಲಕ ಪಾಕಿಸ್ತಾನ ಗೆಲುವಿನ ನಗೆ ಬೀರುವ ಮೂಲಕ ಸೆಮಿಸ್ ಪ್ರವೇಶಿಸುವ ಕನಸನ್ನು ಜೀವಂತವಾಗಿಟ್ಟುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com