ಕ್ರಿಕೆಟ್ ಇತಿಹಾಸದಲ್ಲೇ ಫನ್ನಿ ರನೌಟ್ ಮಿಸ್; ಕಕ್ಕಾ ಬಿಕ್ಕಿಯಾಗಿ ನಿಂತ ಅಂಪೈರ್, ವಿಡಿಯೋ ನೋಡಿ ನಕ್ತೀರಾ!

ಕೈಗೆ ಬಂದ ತುತ್ತು, ಬಾಯಿಗೆ ಬಂದಿಲ್ಲ ಎಂಬ ಗಾದೆ ಇದೆ. ಅದೇ ರೀತಿ ಕೈಗೆ ಬಂದ ಚೆಂಡನ್ನು ರನೌಟ್ ಮಾಡದೆ ಕೀಪರ್ ಗೆ ಎಸೆದ ವಿಚಿತ್ರ ಘಟನೆ ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೈಗೆ ಬಂದ ತುತ್ತು, ಬಾಯಿಗೆ ಬಂದಿಲ್ಲ ಎಂಬ ಗಾದೆ ಇದೆ. ಅದೇ ರೀತಿ ಕೈಗೆ ಬಂದ ಚೆಂಡನ್ನು ರನೌಟ್ ಮಾಡದೆ ಕೀಪರ್ ಗೆ ಎಸೆದ ವಿಚಿತ್ರ ಘಟನೆ ವರದಿಯಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಮಾಡಿದ ತಪ್ಪು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 
ಕೇಟ್ ಕ್ರಾಸ್ ಎಸೆದ ಚೆಂಡನ್ನು ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಕವರ್ಸ್ ನಲ್ಲಿ ಹೊಡೆದು ಸಿಂಗಲ್ ರನ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಈ ವೇಳೆ ಸುಲಭವಾಗಿ ರನೌಟ್ ಆಗುವ ಸಾಧ್ಯತೆ ಇತ್ತು. ಆದರೆ ಬೌಲರ್ ಎಡವಟ್ಟಿನಿಂದ ಔಟ್ ಆಗಿಲಿಲ್ಲ.
ಸಿಕ್ಕ ಚೆಂಡನ್ನು ಫೀಲ್ಡರ್ ನೇರವಾಗಿ ಬೌಲರ್ ಕೇಟ್ ಕೈಗೆ ಎಸೆದಿದ್ದಾರೆ. ಈ ವೇಳೆ ನಾನ್ ಸ್ಟ್ರೈಕ್ ಕಡೆ ಓಡುತ್ತಿದ್ದ ಬ್ಯಾಟ್ಸ್ ಮನ್ ಕ್ರಿಸ್ ನ ಮಧ್ಯದಲ್ಲಿದ್ದರು. ಇನ್ನು ತಾವು ಔಟ್ ಆಗುತ್ತೇವೆ ಎಂದುಕೊಂಡು ಓಡಿ ಬರುತ್ತಿದ್ದರು. ಆದರೆ ಬೌಲರ್ ಚೆಂಡನ್ನು ವಿಕೆಟ್ ಗೆ ಹೊಡೆಯದೆ ಕೀಪರ್ ಗೆ ಎಸೆದರು. ಅಷ್ಟರಲ್ಲಿ ಸ್ಟ್ರೈಕ್ ಕಡೆ ಓಡುತ್ತಿದ್ದ ಆಟಗಾರ್ತಿ ಆರಾಮವಾಗಿ ಕ್ರಿಸ್ ಮುಟ್ಟಿದ್ದರಿಂದ ರನೌಟ್ ಮಿಸ್ ಆಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬೌಲರ್ ನಗೆಪಾಟಲಿಗೆ ಗುರಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com