ವಿಶ್ವಕಪ್ ಕ್ರಿಕೆಟ್ : ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶಕ್ಕೆ 62 ರನ್ ಗಳ ಗೆಲುವು , ಸೆಮಿಫೈನಲ್ ಆಸೆ ಜೀವಂತ

ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ 62 ರನ್ ಗೆಲುವು ದಾಖಸಿದೆ. ಈ ಮೂಲಕ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಬಾಂಗ್ಲಾ ದೇಶದ ಆಟಗಾರರ ಸಂಭ್ರಮ
ಬಾಂಗ್ಲಾ ದೇಶದ ಆಟಗಾರರ ಸಂಭ್ರಮ
ಸೌತಾಂಪ್ಟನ್ : ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ  ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ 62 ರನ್ ಗೆಲುವು ದಾಖಸಿದೆ. ಈ ಮೂಲಕ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಬೌಲಿಂಗ್ ಆಯ್ದುಕೊಂಡಿತು. ಬ್ಯಾಟ್ ಮಾಡಿದ ಬಾಂಗ್ಲಾದೇಶ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತು.ಮುಷ್ಫಿಕರ್‌ ರಹಿಮ್‌  ಅವರ ಅರ್ಧಶತಕದ ಬಲದಿಂದ ಬಾಂಗ್ಲಾದೇಶ ತಂಡ ವಿಶ್ವಕಪ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. 
ಮುಷ್ಫಿಕರ್‌ ರಹೀಮ್‌ ಮತ್ತು ಶಕಿಬ್‌ ಅಲ್‌ ಹಸನ್‌ ಮೂರನೇ ವಿಕೆಟ್‌ಗೆ 61 ರನ್‌ ಜತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. 69 ಎಸೆತಗಳಲ್ಲಿ 51 ರನ್‌ ಗಳಿಸಿದ್ದ ಶಕಿಬ್‌, ವಿಶ್ವಕಪ್‌ನಲ್ಲಿ 1000 ರನ್‌ ಪೂರೈಸಿದ ಬಾಂಗ್ಲಾದೇಶದ ಮೊದಲ ಆಟಗಾರ ಎನಿಸಿದರು. ಇದು ಟೂರ್ನಿಯಲ್ಲಿ ಅವರ ಮೂರನೇ ಅರ್ಧಶತಕ. ಈ ಸಾಧನೆಯೊಂದಿಗೆ ಶಕಿಬ್‌ ಪ್ರಸಕ್ತ ಟೂರ್ನಿಯಲ್ಲಿ ಗರಿಷ್ಠ ರನ್‌ ಗಳಿಸಿದವರ ಪಟ್ಟಿಯಲ್ಲಿ ಮತ್ತೆ ಅಗ್ರಪಟ್ಟಕ್ಕೇರಿದರು. 
ಮೊಸದೆಕ್‌ ಹೊಸೇನ್‌ 35, ಮಹಮ್ಮದುಲ್ಲಾ ಸಹ 27 ರನ್‌ ಗಳಿಸಿದರು. ಬಾಂಗ್ಲಾ ಆಟಗಾರರನ್ನು ಕಾಡಿದ ಸ್ಪಿನ್ನರ್‌ ಮುಜೀಬ್‌ 39ಕ್ಕೆ 3 ವಿಕೆಟ್‌ ಪಡೆಯುವ ಮೂಲಕ ಬಾಂಗ್ಲಾದೇಶದ ಬೃಹತ್‌ ಮೊತ್ತಕ್ಕೆ ಕಡಿವಾಣ ಹಾಕಿದರು. 
ನಂತರ ಬ್ಯಾಟ್ ಮಾಡಿದ ಅಫಘಾನಿಸ್ತಾನ, 47 ಓವರ್‌ನಲ್ಲಿ 200 ರನ್‌ಗಳಿಗೆ ಆಲೌಟಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com