ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್ ಗೆಲ್ಲಲು ವಿರಾಟ್ ಕೊಹ್ಲಿ ಕಾರಣವಾಗಿದ್ದೇಗೆ: ಶೋಯಬ್ ಅಖ್ತರ್ ಹೇಳಿದ್ದೇನು?

ಸತತ ಸೋಲಿನಿಂದ ಕಂಗೆಟ್ಟಿದ್ದ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದ್ದು ಈ ಗೆಲುವಿಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸ್ಫೂರ್ತಿಯಾಗಿದ್ದಾರೆ ಎಂದು ಮಾಜಿ ಪಾಕ್ ಕ್ರಿಕೆಟಿಗ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಸತತ ಸೋಲಿನಿಂದ ಕಂಗೆಟ್ಟಿದ್ದ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದ್ದು ಈ ಗೆಲುವಿಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸ್ಫೂರ್ತಿಯಾಗಿದ್ದಾರೆ ಎಂದು ಮಾಜಿ ಪಾಕ್ ಕ್ರಿಕೆಟಿಗ ಶೋಯಬ್ ಅಖ್ತರ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 7 ವಿಕೆಟ್ ಕಳೆದುಕೊಂಡು 308 ರನ್ ಗಳಿಸಿತ್ತು. ತಂಡ ಉತ್ತಮ ಮೊತ್ತ ಕಲೆಹಾಕಲು ಪಾಕ್ ಬ್ಯಾಟ್ಸ್ ಮನ್ ಗಳ ಉತ್ತಮ ಬ್ಯಾಟಿಂಗ್ ಕಾರಣವಾಗಿತ್ತು. ಇನ್ನು ಬಾಬರ್ ಅಜಂ ಸಹ 69 ರನ್ ಬಾರಿಸಿದ್ದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಬಾಬರ್ ಅಜಂ ನನಗೆ ಕೊಹ್ಲಿ ಸ್ಫೂರ್ತಿ ಎಂದು ಹೇಳಿದ್ದರು. ಅದಕ್ಕೆ ನಾನು ಹಾಗಾದರೆ ಅವರಂತೆ ಆಡುವುದನ್ನು ಕಲಿ ಎಂದು ಹೇಳಿದ್ದೆ. ಅದರಂತೆ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಬಾಬರ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದರು ಎಂದು ಶೋಯಬ್ ಅಖ್ತರ್ ವಿಡಿಯೋದಲ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೇನ್ ವಿಲಿಯಮ್ಸನ್ ಇವರೆಲ್ಲಾ ಅತ್ಯುತ್ತಮವಾದ ಹೊಡೆತಗಳ ಮೂಲಕ ವೇಗವಾಗಿ ಅರ್ಧ ಶತಕವನ್ನು ಪೂರೈಸುತ್ತಾರೆ. ಅದೇ ರೀತಿ ನೀನು ಆಡಿದರೆ ತಂಡದ ರನ್ ಗತಿ ಹೆಚ್ಚುತ್ತದೆ ಎಂದು ಶೋಯಬ್ ಬಾಬರ್ ಗೆ ಸಲಹೆ ನೀಡಿದ್ದರಂತೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com