ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ವಿರುದ್ಧ 64 ರನ್ ಗಳ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ

ಲಾರ್ಡ್ಸ್ ಕ್ರಿಡಾಂಗಣದಲ್ಲಿ ಇಂದು ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ತವರು ನೆಲದಲ್ಲಿಯೇ ಇಂಗ್ಲೆಂಡ್ ತಂಡವನ್ನು 64 ರನ್ ಗಳ ಅಂತರದಿಂದ ಸೋಲಿಸಿದ ಆಸ್ಟ್ರೇಲಿಯಾ ಸೆಮಿ ಫೈನಲ್ ಪ್ರವೇಶಿಸಿದೆ.
ಆಸೀಸ್, ಇಂಗ್ಲೆಂಡ್ ಆಟಗಾರರು
ಆಸೀಸ್, ಇಂಗ್ಲೆಂಡ್ ಆಟಗಾರರು
ಲಂಡನ್ : ಲಾರ್ಡ್ಸ್ ಕ್ರಿಡಾಂಗಣದಲ್ಲಿ ಇಂದು ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ತವರು ನೆಲದಲ್ಲಿಯೇ ಇಂಗ್ಲೆಂಡ್ ತಂಡವನ್ನು 64 ರನ್ ಗಳ ಅಂತರದಿಂದ ಸೋಲಿಸಿದ ಆಸ್ಟ್ರೇಲಿಯಾ ಸೆಮಿ ಫೈನಲ್ ಪ್ರವೇಶಿಸಿದೆ. ಈ ಮೂಲಕ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎಂದೆನಿಸಿಕೊಂಡಿದೆ. 
ಟಾಸ್ ಸೋತು ಮೊದಲು ಬ್ಯಾಟಿಂಗ್‌  ಮಾಡಿದ ಆಸ್ಟ್ರೇಲಿಯಾ, ನಾಯಕ ಆ್ಯರೋನ್ ಫಿಂಚ್ ಆಕರ್ಷಕ ಶತಕ ಹಾಗೂ ಡೇವಿಡ್ ವಾರ್ನರ್ ಅರ್ಧಶತಕದ (53) ನೆರವಿನಿಂದ 285 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಆಸ್ಟ್ರೇಲಿಯಾ ನೀಡಿದ 286 ರನ್ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ 221ಕ್ಕೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನ್ನುಭವಿಸಿತು. 
ತಂಡ 30 ರನ್ ಗಳಿಸುವುದಕ್ಕೂ ಮುನ್ನ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ಇಂಗ್ಲೆಂಡ್ 44.4 ಓವರ್ ಗಳಲ್ಲಿ 221 ರನ್ ಗಳಿಸಲಷ್ಟೇ ಶಕ್ತವಾಯಿತು.ಇಂಗ್ಲೆಂಡ್ ಗೆಲುವಿನ ಆಸೆ ಚಿಗುರಿಸಿದ್ದ ಬೆನ್ ಸ್ಟೋಕ್ಸ್  89 ರನ್ ಗಳಿಸಿ ಸ್ಟಾರ್ಕ್ ಎಸೆತದಲ್ಲಿ ನಿರ್ಗಮಿಸಿದರು. ಇವರ ಬೆನ್ನಲ್ಲೇ  ಮೊಯೀನ್ ಅಲಿ (6) ಕ್ರಿಸ್ ವೋಕ್ಸ್  (26) ಜೊಪ್ರಾ ಅರ್ಚರ್ (1) ಅದಿಲ್ ರಶಿದ್ (25) ವಿಕೆಟ್ ಒಪ್ಪಿಸುವ ಮೂಲಕ ಇಂಗ್ಲೆಂಡ್ ತಂಡ ಸೋಲಿಗೆ ಶರಣಾಯಿತು.
ಕಾಂಗರೊಗಳ ವಿರುದ್ಧ ಸೋತ ಇಂಗ್ಲೆಂಡ್  ಸೆಮಿ ಫೈನಲ್ ಪ್ರವೇಶಿಸಲು ಮುಂದಿನ ಭಾರತ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ಒಂದು ವೇಳೆ ಇಂಗ್ಲೆಂಡ್ ತಂಡ ಒಂದು ಪಂದ್ಯದಲ್ಲಿ ಗೆದ್ದರೆ ಟೂರ್ನಿಯಲ್ಲಿನ ಇತರ ತಂಡಗಳ ಫಲಿತಾಂಶದ ಆಧಾರದ ಮೇಲೆ ಅದರ ಅದೃಷ್ಟ ನಿಂತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com