ಸೆಮೀಸ್ ಕನಸು ಕಾಣುತ್ತಿರುವ ಬಾಂಗ್ಲಾಗೆ ಭಾರಿ ಪೆಟ್ಟು, ಮೊಹಮ್ಮದುಲ್ಲಾಗೆ ಗಾಯ!

ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ಸ್ ಪ್ರವೇಶಿಸುವ ಕನಸು ಕಾಣುತ್ತಿರುವ ಬಾಂಗ್ಲಾದೇಶ ತಂಡಕ್ಕೆ ಭಾರಿ ಆಘಾತವಾಗಿದ್ದು, ತಂಡದ ಪ್ರಮುಖ ಆಲ್ ರೌಂಡರ್ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ಮೊಹಮ್ಮದುಲ್ಲಾಗೆ ಗಾಯಕ್ಕೆ ತುತ್ತಾಗಿದ್ದಾರೆ.

Published: 26th June 2019 12:00 PM  |   Last Updated: 27th June 2019 12:46 PM   |  A+A-


Big blow for Bangladesh; Mahmudullah suffers calf injury ahead of India clash

ಸಂಗ್ರಹ ಚಿತ್ರ

Posted By : SVN SVN
Source : Online Desk
ಸೌಥ್ಯಾಂಪ್ಟನ್: ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ಸ್ ಪ್ರವೇಶಿಸುವ ಕನಸು ಕಾಣುತ್ತಿರುವ ಬಾಂಗ್ಲಾದೇಶ ತಂಡಕ್ಕೆ ಭಾರಿ ಆಘಾತವಾಗಿದ್ದು, ತಂಡದ ಪ್ರಮುಖ ಆಲ್ ರೌಂಡರ್ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ಮೊಹಮ್ಮದುಲ್ಲಾಗೆ ಗಾಯಕ್ಕೆ ತುತ್ತಾಗಿದ್ದಾರೆ.

ಸೋಮವಾರ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಮೊಹಮದುಲ್ಲಾ ಕಾಲಿನಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಈ ವೇಳೆ ಮಹಮುದುಲ್ಲಾ ರನ್ ಓಡಲು ತೊಂದರೆ ಆಗುತ್ತಿತ್ತು. ಈ ಪಂದ್ಯದಲ್ಲಿ ಮೊಹಮ್ಮದುಲ್ಲಾ 38 ಎಸೆತಗಳಲ್ಲಿ 27 ರನ್ ಗಳಿಸಿದರು. ಇದೇ ಕಾರಣಕ್ಕೆ ಅವರು ಆಫ್ಘನ್ ವಿರುದ್ಧದ ಪಂದ್ಯದಲ್ಲಿ ಅವರು ಕ್ಷೇತ್ರರಕ್ಷಣೆ ಮಾಡಲಿಲ್ಲ.

ಮೊಹಮ್ಮದುಲ್ಲಾ ಗಾಯಕ್ಕೆ ತುತ್ತಾಗಿದ್ದು, ಬಾಂಗ್ಲಾ ತಂಡಕ್ಕೆ ತಲೆ ನೋವಾಗಿದೆ. ಬಾಂಗ್ಲಾ, ನಾಲ್ಕರ ಘಟ್ಟದ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಇನ್ನು ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇ ಬೇಕಿದೆ. ಬಾಂಗ್ಲಾ, ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಮೂಲಗಳ ಪ್ರಕಾರ ಮೊಹಮದುಲ್ಲಾ ಅವರ ಗಾಯ ವಾಸಿಯಾಗಲು 10 ದಿನಗಳ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp